alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ಬಜೆಟ್: ರಾಜ್ಯಕ್ಕೆ ಸಿಕ್ಕಿದ್ದೇನು..?

rail-budget-2016-625-300_625x300_41456329225

ಮೋದಿ ಸರ್ಕಾರದ 2016-17 ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಹಳೆ ರೈಲುಗಳಿಗೆ ಹೊಸ ಆಯಾಮ ತರಲು ಮುಂದಾಗಿರುವ ರೈಲ್ವೆ ಸಚಿವ ಸುರೇಶ್ ಪ್ರಭು ಕರ್ನಾಟಕಕ್ಕೂ ಸಹ ಹಲವು ಯೋಜನೆಗಳನ್ನು ನೀಡಿ ರಾಜ್ಯದ ಅಭಿವೃದ್ದಿಯತ್ತ ಗಮನ ಹರಿಸಿದ್ದಾರೆ.

ಕರ್ನಾಟಕದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಒದಗಿಸಲಾಗುವ ಅನುದಾನದ ಪ್ರಮಾಣವನ್ನು ಶೇಕಡಾ 19 ರಷ್ಟು ಹೆಚ್ಚಿಸಿ 2779 ರೂಪಾಯಿಗಳ ಯೋಜನೆಯನ್ನು ರಾಜ್ಯಕ್ಕೆ ನೀಡಿರುವ ಸುರೇಶ್ ಪ್ರಭು, ನೇತ್ರಾವತಿ-ಮಂಗಳೂರು ಸೆಂಟ್ರಲ್, ಬೀರೂರು-ಶಿವಮೊಗ್ಗ ಮತ್ತು ಸಕಲೇಶಪುರ-ಸುಬ್ರಹ್ಮಣ ಜೋಡಿ ಮಾರ್ಗ ಹಾಗೂ ನಂಜನಗೂಡು- ನಿಲಂಬೂರು, ಬಂಗಾರಪೇಟೆ- ಮುಳಬಾಗಲು, ಮೈಸೂರು- ಕುಶಾಲನಗರ, ತಾಳಗುಪ್ಪ- ಹೊನ್ನಾವರ, ಧಾರವಾಡ-ಬೆಳಗಾವಿ ಹಾಗೂ ತಾಳಗುಪ್ಪ-ಸಿದ್ದಾಪುರ ಈ ಹೊಸ ಮಾರ್ಗಗಳ ಕಾಮಗಾರಿಗೆ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದು, ಆ ಮೂಲಕ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ.

ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಹೊಸ ಮಾರ್ಗಗಳ ಸಮೀಕ್ಷಾ ಕಾರ್ಯಕ್ಕೂ ಹಣ ಮೀಸಲಿಟ್ಟಿರುವ ಸುರೇಶ್ ಪ್ರಭು, ಕಲಬುರ್ಗಿ- ಲಾತೂರ್, ಲೋಕಾಪುರ- ಧಾರವಾಡ ಹೊಸ ಹಳಿ ಧಾರವಾಡ- ಬೆಳಗಾವಿ ಹೊಸ ಮಾರ್ಗಗಳತ್ತ ಗಮನ ನೀಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದರ ಜತೆಗೆ ರಾಜ್ಯದ ಹಲವೆಡೆ ರೈಲ್ವೆ ಕ್ರಾಸಿಂಗ್, ಕೆಳ ಹಾಗೂ ಮೇಲ್ಸೇತುವೆಗಳ ನಿರ್ಮಾಣಕ್ಕೆ ಪ್ರಸ್ತುತ ಮುಂಗಡ ಪತ್ರದಲ್ಲಿ ಹಣ ಒದಗಿಸಲಾಗಿದ್ದು, ಮೀರಜ್- ಲೋಂಡಾ ವಿಭಾಗದಲ್ಲಿ ಹೊಸ ವಿದ್ಯುದೀಕರಣ ಕಾಮಗಾರಿಗೆ 208.15 ಕೋಟಿ ರೂಪಾಯಿ ನೀಡುವ ಮೂಲಕ ಬಹುದಿನಗಳ ಬೇಡಿಕೆಗೆ ಸಚಿವರು ಸ್ಪಂದಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...