alex Certify
ಕನ್ನಡ ದುನಿಯಾ       Mobile App
       

Kannada Duniya

5 ಕೋಟಿ ರೂ.ಗೆ ಜೆ.ಡಿ.ಎಸ್. ಟಿಕೆಟ್ ಮಾರಾಟ : ಆರೋಪ

ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ರಾಯಚೂರು ಜಿಲ್ಲೆ ಲಿಂಗಸಗೂರು ಜೆ.ಡಿ.ಎಸ್. ಟಿಕೆಟ್ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಲಿಂಗಸಗೂರು ಕ್ಷೇತ್ರದ ಜೆ.ಡಿ.ಎಸ್. ಟಿಕೆಟ್ ಗೆ 5 ಕೋಟಿ ರೂ. ಕೊಟ್ಟಿರುವುದಾಗಿ ಅಭ್ಯರ್ಥಿ ಸಿದ್ಧು ಬಂಡಿ ಹೇಳಿದ್ದಾರೆ.

ಲಿಂಗಸಗೂರು ಕ್ಷೇತ್ರದಲ್ಲಿ ಮೊದಲಿಗೆ ಆಲ್ಕೋಡ್ ಹನುಮಂತಪ್ಪನವರಿಗೆ ಜೆ.ಡಿ.ಎಸ್. ಟಿಕೆಟ್ ನೀಡಲಾಗಿತ್ತು. ಬಳಿಕ ಸಿದ್ದು ಬಂಡಿಗೆ ಟಿಕೆಟ್ ನೀಡಲಾಗಿದೆ. ನಾನು 5 ಕೋಟಿ ರೂ. ಕೊಟ್ಟು ಟಿಕೆಟ್ ಹಾಗೂ ಕ್ಷೇತ್ರವನ್ನು ಪಡೆದಿದ್ದೇನೆ ಎಂದು ಸಿದ್ದು ಬಂಡಿ ಹೇಳಿದ್ದರೆನ್ನಲಾಗಿದೆ.

ಇದನ್ನು ತಿಳಿದ ಅಲ್ಕೋಡ್ ಹನುಮಂತಪ್ಪ ಫೋನ್ ಮಾಡಿ ಸಿದ್ದು ಬಂಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ನನಗೆ ಹಣ ಕೊಟ್ಟಿದ್ದರೆ ಕೊಟ್ಟಿರುವುದಾಗಿ ಹೇಳಿ, ಇಲ್ಲವಾದರೆ ಕೊಟ್ಟಿಲ್ಲವೆಂದು ಹೇಳಿ. ಕೂಡಲೇ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿ ಎಂದು ತಾಕೀತು ಮಾಡಿದ್ದಾರೆ. ಆಲ್ಕೋಡ್ ಹನುಮಂತಪ್ಪ ತಾಕೀತು ಮಾಡಿರುವ ವಿಡಿಯೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...