alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯಕ್ಕೆ ‘ಸಿಹಿ’ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರದಿಂದ ರಾಜ್ಯಕ್ಕೆ ಸಿಹಿ ಸುದ್ದಿ ನೀಡಲಾಗಿದ್ದು, ರಾಯಚೂರು ಜಿಲ್ಲೆಗೆ IIIT ಮಂಜೂರು ಮಾಡಲಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ IIIT ಘೋಷಣೆ ಮಾಡಿದ್ದು, ಐ.ಐ.ಐ.ಟಿ. ಮಂಜೂರು ಪತ್ರವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ನೀಡಿದ್ದಾರೆ.

ರಾಜ್ಯ ಸರ್ಕಾರಕ್ಕೆ ಮಂಜೂರು ಪತ್ರವನ್ನು ಕಳಿಸಲಾಗುವುದು. 2018 -19 ನೇ ಸಾಲಿನಿಂದ ರಾಯಚೂರಿನಲ್ಲಿ ಐ.ಐ.ಐ.ಟಿ. ಸ್ಥಾಪನೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಹಿಂದೆ ರಾಯಚೂರಿಗೆ ಐ.ಐ.ಟಿ. ಮಂಜೂರು ಮಾಡಬೇಕೆಂದು ಬೇಡಿಕೆ ಇಡಲಾಗಿತ್ತು. ಮಂಜೂರು ಹಂತದಲ್ಲಿ ಧಾರವಾಡ ಜಿಲ್ಲೆ ಐ.ಐ.ಟಿ. ಮಂಜೂರು ಮಾಡಲಾಗಿತ್ತು. ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳ ಬೇಡಿಕೆಯಂತೆ ಐ.ಐ.ಐ.ಟಿ. ಮಂಜೂರು ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...