alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಭಿಕ್ಷುಕಿ

raichuru

ರಾಯಚೂರು: ರಸ್ತೆಯಲ್ಲೇ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ, ಭಿಕ್ಷುಕಿಯೊಬ್ಬರು ಆಪತ್ಬಾಂಧವಳಾದ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ.

ಹೀರೆಬಾವಿಯ ರಾಮಣ್ಣ ಹಾಗೂ ಯಲ್ಲಮ್ಮ ದಂಪತಿಗೆ ಮೂವರು ಗಂಡು ಮಕ್ಕಳಿದ್ದು, 4 ನೇ ಬಾರಿಗೆ ಯಲ್ಲಮ್ಮ ಗರ್ಭಿಣಿಯಾಗಿದ್ದರು.

ಹೆರಿಗೆ ದಿನಗಳು ಸಮೀಪಿಸಿದ್ದರಿಂದ ಪತಿ ಹಾಗೂ ತಾಯಿಯೊಂದಿಗೆ ಆಸ್ಪತ್ರೆಗೆ ಬಂದಿದ್ದ ಅವರಿಗೆ ವೈದ್ಯರು ಹೆರಿಗೆಯಾಗಲು ಇನ್ನೂ 2 ದಿನ ಆಗಬಹುದೆಂದು ತಿಳಿಸಿದ್ದಾರೆ.

ವಾಪಸ್ ಮನೆಗೆ ಹೋಗುವಾಗ, ಯಲ್ಲಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನಡುರಸ್ತೆಯಲ್ಲೇ ನೋವಿನಿಂದ ಸಂಕಟ ಪಡುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪತಿ, ತಾಯಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಯಲ್ಲಮ್ಮರ ಸಂಕಟವನ್ನು ಕಂಡ ಅಲ್ಲೇ ಇದ್ದ  ಭಿಕ್ಷುಕಿ  ಯಂಕಮ್ಮ ಎಂಬುವವರು ಸಹಾಯಕ್ಕೆ ಧಾವಿಸಿ ಬಂದಿದ್ದಾರೆ.

ಅಲ್ಲಿದ್ದವರ ಸಹಕಾರ ಪಡೆದು ನಡು ರಸ್ತೆಯಲ್ಲೇ ಯಲ್ಲಮ್ಮ ಅವರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

ಹೆಣ್ಣು ಮಗುವಿಗೆ ಯಲ್ಲಮ್ಮ ಜನ್ಮ ನೀಡಿದ್ದಾರೆ. ಬಳಿಕ ತಾಯಿ, ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಪತ್ಬಾಂಧವಳಂತೆ ಬಂದು ಹೆರಿಗೆ ಮಾಡಿಸಿದ ಭಿಕ್ಷುಕಿ ಯಂಕಮ್ಮ ಅವರಿಗೆ ಅಲ್ಲಿದ್ದವರು ಕೃತಜ್ಞತೆ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...