alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಕ್ಕೆ ಮನಸೋತ ಮೋದಿಯಿಂದ ಬುದ್ಧಿಮಾತು

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ರಾಯಚೂರಿನಲ್ಲಿ ಇಂದು ಪ್ರಚಾರ ನಡೆಸಿದ ಪ್ರಧಾನಿ ಮೋದಿ ಅಭಿಮಾನಿಯೊಬ್ಬನ ಅಭಿಮಾನಕ್ಕೆ ಮನಸೋತಿದ್ದಾರೆ.

ರಾಯಚೂರು ಯುವಕ ಬಸವರಾಜು ಬೆನ್ನ ಮೇಲೆ ಮೋದಿಯವರ ಭಾವಚಿತ್ರವನ್ನು ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಮೇಲಿನ ಅಭಿಮಾನದಿಂದ ಬಸವರಾಜು ಟ್ಯಾಟೋ ಹಾಕಿಸಿಕೊಂಡಿದ್ದು, ರಾಯಚೂರಿನ ಸಮಾವೇಶದಲ್ಲಿ ಇದನ್ನು ಗಮನಿಸಿದ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಅಭಿಮಾನಕ್ಕೆ ನಾನು ಮನಸೋತಿದ್ದೇನೆ. ಆದರೆ, ಅಭಿಮಾನ ತೋರಿಸಲು ದೇಹವನ್ನು ದಂಡಿಸುವುದು ಒಳ್ಳೆಯದಲ್ಲ, ಟ್ಯಾಟೋ ಹಾಕಿದವರು ಒಳ್ಳೆಯ ಕಲಾವಿದರಾಗಿದ್ದಾರೆ. ಆದರೆ, ದೇಹಕ್ಕೆ ಹೀಗೆಲ್ಲಾ ತೊಂದರೆ ಕೊಡಬೇಡಿ ಎಂದು ಭಾಷಣದಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...