alex Certify
ಕನ್ನಡ ದುನಿಯಾ       Mobile App
       

Kannada Duniya

ಶೃಂಗೇರಿ ಶ್ರೀಗಳ ಜೊತೆ ರಾಹುಲ್ ಮಾತುಕತೆ

ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡನೇ ದಿನ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದಾರೆ. ಶಾರದಾಂಬೆ ದರ್ಶನ ಪಡೆದ ರಾಹುಲ್ ಗಾಂಧಿ ನಂತ್ರ ಭಾರತೀ ತೀರ್ಥ ಶ್ರೀಗಳನ್ನು ಭೇಟಿಯಾದ್ರು. ರಾಹುಲ್ ಒಬ್ಬರನ್ನೇ ಕರೆದು ಶ್ರೀಗಳು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಶ್ರೀಗಳು ಹಾಗೂ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ.

ರಾಹುಲ್ ಭೇಟಿ ನಂತ್ರ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ವೇಣುಗೋಪಾಲ್ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಯಾರ ಕಾಲಿಗೂ ಬೀಳದ ಸಿಎಂ ಸಿದ್ದರಾಮಯ್ಯ ಭಾರತೀ ತೀರ್ಥರ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ ಎನ್ನಲಾಗಿದೆ. ಗಾಂಧಿ ಪರಿವಾರದ ಜೊತೆ ಶೃಂಗೇರಿ ಮಠ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿನ್ನೆಲೆಯಲ್ಲಿ ಇಂದು ರಾಹುಲ್ ಶಾರದಾಂಬೆ ದರ್ಶನ ಪಡೆದ್ರು.

ನಿನ್ನೆ ಬುಧವಾರ ರಾಹುಲ್ ಗಾಂಧಿ ಉಡುಪಿಗೆ ಭೇಟಿ ನೀಡಿದ್ದರು. ಈ ವೇಳೆ ಬಸವಣ್ಣನ ನೀತಿಗಳನ್ನು ಜನರ ಮುಂದಿಡುವ ಮೂಲಕ ಪಿಎಂ ಮೋದಿ ಕಾರ್ಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...