alex Certify
ಕನ್ನಡ ದುನಿಯಾ       Mobile App
       

Kannada Duniya

ಭಾಷಣದ ವೇಳೆ ನಗೆಪಾಟಲಿಗೀಡಾದ ರಾಹುಲ್

rahul_gandhi_1502873034_618x347

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿನ ಜಯನಗರ ಕನಕನಪಾಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ನಂತ್ರ ಮಾತನಾಡಿದ ರಾಹುಲ್ ಎಲ್ಲರ ನಗೆಪಾಟಲಿಗೆ ಕಾರಣರಾದ್ರು. ಭಾಷಣದ ವೇಳೆ ಇಂದಿರಾ ಕ್ಯಾಂಟೀನ್ ಎನ್ನುವ ಬದಲು ಅಮ್ಮ ಕ್ಯಾಂಟೀನ್ ಎಂದ್ರು ರಾಹುಲ್.

ಉದ್ಘಾಟನೆ ನಂತ್ರ ಮಾತನಾಡ್ತಿದ್ದ ರಾಹುಲ್ ಎಲ್ಲರೂ ಅಮ್ಮ ಕ್ಯಾಂಟೀನ್ ಲಾಭ ಪಡೆಯಬೇಕೆಂದ್ರು. ನಂತ್ರ ಅಮ್ಮ ಕ್ಯಾಂಟೀನ್ ಬದಲು ಇಂದಿರಾ ಕ್ಯಾಂಟೀನ್ ಎಂದು ತಮ್ಮ ತಪ್ಪನ್ನು ಸರಿಪಡಿಸಿಕೊಂಡ್ರು. ಇಂದಿನಿಂದ ಯಾರೂ ಹಸಿವಿನಿಂದ ಬಳಲುವುದಿಲ್ಲ. ಇದು ಸಂತೋಷದ ವಿಚಾರ. ಕಾಂಗ್ರೆಸ್ ಸರ್ಕಾರ ಇಂತ ಯೋಚನೆ ಶುರುಮಾಡಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಪ್ರದೇಶಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದ ರಾಹುಲ್ ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರೂ ಈ ಕ್ಯಾಂಟೀನ್ ನಲ್ಲಿ ಆಹಾರ ಸೇವನೆ ಮಾಡ್ತಾರೆ ಎಂದ್ರು.

ಕ್ಯಾಂಟೀನ್ ಗೆ ಚಾಲನೆ ನೀಡಿದ ರಾಹುಲ್ ಅಲ್ಲಿಯೇ ತಯಾರಾದ ಆಹಾರವನ್ನು ಸೇವಿಸಿದ್ರು. ಜೊತೆಗೆ ಕ್ಯಾಂಟೀನ್ ಬಗ್ಗೆ ಮಾಹಿತಿ ಪಡೆದ್ರು. ಮಧ್ಯಾಹ್ನ ಹಾಗೂ ರಾತ್ರಿ ಊಟ 10 ರೂಪಾಯಿಗೆ ಸಿಗಲಿದೆ. ತಿಂಡಿ 5 ರೂಪಾಯಿಗೆ ಸಿಗಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...