alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿ ಡಾಬಾದ ಬಜ್ಜಿಗೆ ಮನಸೋತ ರಾಹುಲ್

ಮುಂಬರುವ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ.

ಇಂದು ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆ 3 ನೇ ದಿನಕ್ಕೆ ಕಾಲಿಟ್ಟಿದ್ದು, ರಾಯಚೂರಿನ ಕಲ್ಮಾಲದಲ್ಲಿ ರಸ್ತೆ ಬದಿಯ ಡಾಬಾವೊಂದಕ್ಕೆ ಭೇಟಿ ನೀಡಿದ ರಾಹುಲ್, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಅಧ್ಯಕ್ಷ ಡಾ. ಜಿ ಪರಮೇಶ್ವರ್, ಡಿ.ಕೆ. ಶಿವಕುಮಾರ್ ಅವರೊಂದಿಗೆ ಬಜ್ಜಿ ತಿಂದು ಟೀ ಕುಡಿದಿದ್ದಾರೆ.

ಈ ವೇಳೆ ಬಜ್ಜಿಯ ಸವಿಗೆ ಮನಸೋತ ರಾಹುಲ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರಲ್ಲದೆ ದಿನಕ್ಕೆ ಎಷ್ಟು ವ್ಯಾಪಾರ ಆಗುತ್ತದೆ ಎಂದು ಡಾಬಾದ ಮಾಲಕಿಗೆ ಕೇಳಿದ್ದು, ಆಕೆ 2000 ರೂ. ಎಂದು ಹೇಳಿದ್ದಾರೆ. ತಮ್ಮ ಜೇಬಿನಿಂದ 2000 ರೂ. ತೆಗೆದು ನೀಡಲು ರಾಹುಲ್ ಮುಂದಾದರೂ ಡಾಬಾ ಮಾಲಕಿ ಹಣ ಸ್ವೀಕರಿಸಲು ನಿರಾಕರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...