alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ದ್ರಾವಿಡ್ ಗೆ ಕೋಟಿ ಕೋಟಿ ವಂಚಿಸಿದೆ ಫೈನಾನ್ಸ್ ಕಂಪನಿ

ಬೆಂಗಳೂರಿನ ವಿಕ್ರಮ್ ಇನ್ವೆಸ್ಟ್ ಮೆಂಟ್ಸ್ ಎಂಬ ಕಂಪನಿ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೆ 6 ಕೋಟಿ ರೂಪಾಯಿ ವಂಚನೆ ಮಾಡಿದೆಯಂತೆ. ಈ ಬಗ್ಗೆ ದ್ರಾವಿಡ್, ಸದಾಶಿವನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹೆಚ್ಚಿನ ರಿಟರ್ನ್ಸ್ ಕೊಡುವುದಾಗಿ ಕಂಪನಿ ದ್ರಾವಿಡ್ ಗೆ ಭರವಸೆ ನೀಡಿತ್ತು. ಅದನ್ನು ನಂಬಿ ದ್ರಾವಿಡ್ 20 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಆದ್ರೆ ಅವರು ಹೂಡಿಕೆ ಮಾಡಿದ ಹಣವನ್ನು ಕೂಡ ಪೂರ್ತಿಯಾಗಿ ಸಂಸ್ಥೆ ವಾಪಸ್ ನೀಡಿಲ್ಲ.

20 ಕೋಟಿ ರೂಪಾಯಿಯಲ್ಲಿ 16 ಕೋಟಿಯನ್ನು ಕಂಪನಿ ವಾಪಸ್ ನೀಡಿದೆಯಂತೆ, ಇನ್ನೂ 4 ಕೋಟಿ ರೂಪಾಯಿ ದ್ರಾವಿಡ್ ಗೆ ಬರಬೇಕಿದೆ. ಇದೇ ರೀತಿ ಸುಮಾರು 800 ಹೂಡಿಕೆದಾರರಿಗೆ 300 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕಂಪನಿ ವಂಚಿಸಿದೆ ಅಂತಾ ಹೇಳಲಾಗ್ತಿದೆ.

ಮಾರ್ಚ್ 3ರಂದು ಪಿಆರ್ ಬಾಲಾಜಿ ಎಂಬಾತ ಕೂಡ ದೂರು ದಾಖಲಿಸಿದ್ದರು. ವಿಕ್ರಮ್ ಇನ್ವೆಸ್ಟ್ ಮೆಂಟ್ಸ್ ಕಂಪನಿಯ ಎಂಡಿ ರಾಘವೇಂದ್ರ ಶ್ರೀನಾಥ್ ಸೇರಿದಂತೆ 5 ಜನರನ್ನು ಈಗಾಗ್ಲೇ ಬಂಧಿಸಲಾಗಿದೆ. ವಿಕ್ರಮ್ ಇನ್ವೆಸ್ಟ್ ಮೆಂಟ್ಸ್ ವಿರುದ್ಧ 100ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ.

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಪ್ರಕಾಶ್ ಪಡುಕೋಣೆ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರಂತೆ. ಅವರಿಗೆ ಸಹ ಮೋಸವಾಗಿದೆ ಅಂತಾ ಹೇಳಲಾಗ್ತಿದೆ. ಆದ್ರೆ ದ್ರಾವಿಡ್ ಹೊರತುಪಡಿಸಿ ಬೇರೆ ಯಾವ ಸೆಲೆಬ್ರಿಟಿಗಳೂ ದೂರು ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...