alex Certify
ಕನ್ನಡ ದುನಿಯಾ       Mobile App
       

Kannada Duniya

ಮರು ಮದುವೆ ಆಗಿಲ್ಲ ಎಂದ್ರು ರಾಧಿಕಾ ಕುಮಾರಸ್ವಾಮಿ

image_760x400

ನಟಿ ರಾಧಿಕಾ ಕುಮಾರಸ್ವಾಮಿ ಎರಡನೇ ಮದುವೆಯಾಗಿದ್ದಾರೆಂಬ ಊಹಾಪೋಹಕ್ಕೆ ರಾಧಿಕಾ ಕುಮಾರಸ್ವಾಮಿ ತೆರೆ ಎಳೆದಿದ್ದಾರೆ. ಎರಡನೇ ಮದುವೆಯಾಗಿಲ್ಲ. ಇದೆಲ್ಲ ಸುಳ್ಳು ವದಂತಿ ಎಂದಿದ್ದಾರೆ.

ನನ್ನ ಕುಟುಂಬದ ಜೊತೆ ನಾನು ಖುಷಿಯಾಗಿದ್ದೇನೆ. ಎರಡನೇ ಮದುವೆಯಾಗುವ ಅನಿವಾರ್ಯತೆ ನನಗಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಓಡಾಡ್ತಿರುವ ಫೋಟೋ ಒಂದು ವರ್ಷ ಹಿಂದಿನದ್ದು. ನನ್ನ ಅಣ್ಣನ ಸ್ನೇಹಿತರ ತೋಟಕ್ಕೆ ಹೋದಾಗ ಈ ಫೋಟೋ ತೆಗೆಯಲಾಗಿತ್ತು. ಆದ್ರೀಗ ಅದನ್ನು ಯಾರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆಂಬುದು ಗೊತ್ತಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳುತ್ತೇನೆಂದು ರಾಧಿಕಾ ಹೇಳಿದ್ದಾರೆ.

ರಾಧಿಕಾ ಕುಮಾರಸ್ವಾಮಿ ಎರಡನೇ ಮದುವೆಯಾಗಿದ್ದಾರೆಂಬ ಸುದ್ದಿ ಹರಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಉದ್ಯಮಿ ವಿವೇಕ್ ರೈ ಹಾಗೂ ರಾಧಿಕಾ ಒಟ್ಟಿಗಿರುವ ಕೆಲ ಫೋಟೋಗಳು ಹರಿದಾಡ್ತಾ ಇದ್ದವು. ರಾಧಿಕಾ ಕುಮಾರಸ್ವಾಮಿ ಮಂಗಳೂರಿನಲ್ಲಿ ನೆಲೆಸಿದ್ದಾರೆನ್ನಲಾಗ್ತಾ ಇತ್ತು. ಇದೆಲ್ಲದಕ್ಕೂ ರಾಧಿಕಾ ಉತ್ತರ ನೀಡಿದ್ದಾರೆ.

ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ಸಿನಿಮಾ ಬಿಟ್ಟಿಲ್ಲ. ಒಳ್ಳೆ ಕಥೆ ಸಿಕ್ಕರೆ ಖಂಡಿತ ಸಿನಿಮಾ ಮಾಡ್ತೇನೆಂದು ರಾಧಿಕಾ ಕುಮಾರಸ್ವಾಮಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...