alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಾಗೃಹದಲ್ಲಿ ಮುಂಬೈ ಯುವತಿಯ ಭರ್ಜರಿ ಡ್ಯಾನ್ಸ್ !

dance-inn

ವಿಜಯಪುರ: ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇರೆಗೆ ಸನ್ನಡೆತೆಯ ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯಪಾಲರು ಅಂಕಿತ ಹಾಕಿದ್ದರಿಂದ ಜೈಲುಹಕ್ಕಿಗಳಾಗಿದ್ದವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅದರಂತೆ ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿ 35 ಕೈದಿಗಳು ಬಿಡುಗಡೆಯಾದರು.

ಇದರ ಅಂಗವಾಗಿ ಜೈಲಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಅವರೆಲ್ಲ ಹೊರಗೆ ಹೋದ ನಂತರ ಶುರುವಾಯ್ತು ನೋಡಿ, ನಾಚ್, ನಾಚ್ ಎನ್ನುತ್ತಾ ಮುಂಬೈನಿಂದ ಆಗಮಿಸಿದ್ದ ಯುವತಿ ಐಟಂ ಡ್ಯಾನ್ಸ್ ಮಾಡುತ್ತಿದ್ದರೆ, ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಕೈದಿಗಳೆಲ್ಲಾ ಕಣ್ಣಿನ ರೆಪ್ಪೆ ಮುಚ್ಚದೇ ನೋಡಿದ್ದಾರೆ. ಹಿಂದಿ ಸಿನಿಮಾ ಹಾಡುಗಳಿಗೆ ಯುವತಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಡ್ಯಾನ್ಸ್ ಮಾಡುತ್ತಿದ್ದ ಯುವತಿಯ ಮೇಲೆ ಕೈದಿಯೊಬ್ಬ ನೋಟುಗಳನ್ನು ತೂರಿದ್ದಾನೆ. ಆತನಿಗೆ ಅಷ್ಟೊಂದು ಹಣ ಜೈಲಲ್ಲಿ ಹೇಗೆ ಬಂತು? ಗಣರಾಜ್ಯೋತ್ಸವ, ಕೈದಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜೈಲಿನಲ್ಲಿ ಐಟಂ ಡ್ಯಾನ್ಸ್ ಮಾಡಿಸಿದ್ದೇಕೆ..? ಎಂಬುದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...