alex Certify
ಕನ್ನಡ ದುನಿಯಾ       Mobile App
       

Kannada Duniya

ಮೀನಿಗೆ ಹಾಕಿದ ಬಲೆಯಲ್ಲಿ 6 ಅಡಿ ಉದ್ದದ ಹೆಬ್ಬಾವು

ಶಿವಮೊಗ್ಗ : ಮೀನಿಗೆ ಹಾಕಿದ ಬಲೆಯಲ್ಲಿ 6 ಅಡಿ ಉದ್ದದ ಹೆಬ್ಬಾವೊಂದು ಸಿಲುಕಿ ಒದ್ದಾಡಿದ ಘಟನೆ ಆಲ್ಕೊಳ ಕೆರೆಯಲ್ಲಿ ನಡೆದಿದ್ದು, ಉರಗ ರಕ್ಷಕ ಕಿರಣ್ ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಕಳೆದ 30 ವರ್ಷಗಳಿಂದ ಕೆರೆಯನ್ನು ಗುತ್ತಿಗೆಗೆ ಪಡೆದು ಮೀನುಗಾರಿಕೆ ನಡೆಸುತ್ತಿದ್ದ ಆಲ್ಕೊಳ ಗ್ರಾಮದ ಲೋಕೇಶ್ ಎಂದಿನಂತೆ ನಿನ್ನೆ ಬಲೆ ಹಾಕಿ ಮನೆಗೆ ತೆರಳಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ಬಂದು ಪರಿಶೀಲಿಸಿದಾಗ ಮೀನಿನ ಜೊತೆಗೆ ದೈತ್ಯ ಗಾತ್ರದ ಹೆಬ್ಬಾವೊಂದು ಸಿಕ್ಕಿಹಾಕಿಕೊಂಡಿರುವುದು ಕಂಡಿದೆ.

ತಕ್ಷಣ ಅವರು ಸ್ನೇಕ್ ಕಿರಣ್ ರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಬಂದ ಕಿರಣ್, ಲೋಕೇಶ್ ಜೊತೆಗೂಡಿ ಬಲೆಯನ್ನು ದಡಕ್ಕೆ ತಂದು ಅನಿವಾರ್ಯವಾಗಿ ಬಲೆಯನ್ನು ಕತ್ತರಿಸಿ ಹಾವನ್ನು ರಕ್ಷಿಸಿದ್ದಾರೆ.

ಹೆಬ್ಬಾವನ್ನು ರಕ್ಷಿಸಲು ಲೋಕೇಶ್ ಅವರು 10 ಸಾವಿರಕ್ಕೂ ಹೆಚ್ಚು ಮೌಲ್ಯದ ಬಲೆಯನ್ನು ಕಳೆದುಕೊಂಡಿದ್ದಾರೆ. ಹೆಬ್ಬಾವನ್ನು ರಕ್ಷಿಸಿ ಅರಣ್ಯ ಅಧಿಕಾರಿಗಳ ಸೂಚನೆ ಮೇರೆಗೆ ಕಾಡಿಗೆ ಬಿಡಲಾಯಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...