alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಗ್ರೆಸ್ ಕಿತ್ತು ಹಾಕುವುದಕ್ಕೆ ಅವನು ಯಾರು…?: ಸಚಿವ ಮಹೇಶ್ ವಿರುದ್ಧ ಪುಟ್ಟರಂಗ ಶೆಟ್ಟಿ ಗುಡುಗು

ಚಾಮರಾಜನಗರ: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಸಧ್ಯ ಎಲ್ಲವೂ ಸರಿಯಾಗಿಯೇ ಇದೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಂಬಿಸುತ್ತಿದ್ದರೂ ಕೆಲ ಸಚಿವರುಗಳೇ ಪರಸ್ಪರ ವಾಗ್ದಾಳಿ ನಡೆಸಿಕೊಳ್ಳುವ ಮೂಲಕ ಒಗ್ಗಟ್ಟಿಗೆ ಮತ್ತೆ ಬೆಂಕಿ ಹಚ್ಚುವ ಕೆಲಸ ಆರಂಭಿಸಿದ್ದು, ಕೈ ಪಾಳಯದಲ್ಲಿ ಮತ್ತೆ ಅಸಮಾಧಾನದ ಹೊಗೆ ಆಡಲು ಆರಂಭವಾಗಿದೆ.

ಇತ್ತೀಚೆಗೆ ಶಿಕ್ಷಣ ಸಚಿವ ಎನ್. ಮಹೇಶ್, ’ಕಾಂಗ್ರೆಸ್ ಗಿಡವನ್ನು ಕಿತ್ತುಹಾಕುವ ಕೆಲಸ ಮಾಡಿದ್ದೇವೆ’ ಎಂಬ ಹೇಳಿಕೆ ವಿರುದ್ಧ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಪುಟ್ಟರಂಗ ಶೆಟ್ಟಿ, ಆಕ್ರೋಶ ವ್ಯಕ್ತಪಡಿಸಿದ್ದು, ಕಿತ್ತು ಹಾಕುವುದಕ್ಕೆ ಅವನು ಯಾರು..? ಅವನೇ ಕಿತ್ತು ಹೋಗುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಎನ್. ಮಹೇಶ್ ತಾವು ಒನ್ ಮ್ಯಾನ್ ಆರ್ಮಿ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಒಂದು ಬಾರಿ ಗೆದ್ದು ಸಚಿವರಾಗಿಯೇ ಇಷ್ಟೊಂದು ಆಟವಾಡುವುದು ಸರಿಯಲ್ಲ. ಮೊದಲು ಸಾಧನೆಯನ್ನು ಮಾಡಿ ತೋರಿಸಲಿ. ಆ ನಂತರ ಮಾತನಾಡಲಿ ಎಂದು ಹೇಳಿದರು.

ಜೆಡಿಎಸ್ 30 ಸ್ಥಾನಗಳನ್ನು ಪಡೆದಿದೆ, ಕಾಂಗ್ರೆಸ್ 80 ಸ್ಥಾನಗಳನ್ನು ಪಡೆದಿದೆ. ಕಾಂಗ್ರೆಸ್ ಮನಸ್ಸು ಮಾಡಿದರೆ ಎನ್. ಮಹೇಶ್ ಅವರನ್ನೇ ಕಿತ್ತು ಹಾಕಬಲ್ಲದು. ಈ ಹಿಂದೆ ಕಾಂಗ್ರೆಸ್ ನ್ನು ಕಿತ್ತಾಕುತ್ತೇವೆ ಎಂದು ಹೇಳಿದವರೆಲ್ಲ ಹೋದರು. ಈಗ ಈತ ಶುರುಮಾಡಿದ್ದಾನೆ ಎಂದು ಕಿಡಿಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...