alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಕಿ ಹತ್ಯೆಗೆ ಸುಪಾರಿ ಕೊಟ್ಟಿದ್ದ ಪಾಗಲ್ ಪ್ರೇಮಿ ಪೊಲೀಸ್ ವಶಕ್ಕೆ

pune-techie-murder759

ಪುಣೆಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಅಂತರಾ ದೇವಾನಂದ ದಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತ ಆರೋಪಿಯನ್ನು ಕೋರ್ಟ್ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬಂಧಿತ ಯುವಕನ ಹೆಸರು ಸಂತೋಷ್ ಕುಮಾರ್ ಅಖಿಲೇಶ್ವರ್ ಪ್ರಸಾದ್ ಗುಪ್ತಾ, ಈತ ಬಿಹಾರದ ಭೋಜ್ಪುರ ಜಿಲ್ಲೆಯವನು. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ. ತಲವಾಡೆಯಲ್ಲಿರುವ Capgemini ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದ 23 ವರ್ಷದ ಯುವತಿ ಅಂತರಾಳನ್ನು ನಡುರಸ್ತೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಬೆಂಗಳೂರಿನಲ್ಲಿ ಗುಪ್ತಾನನ್ನು ಬಂಧಿಸಿ ಕರೆದೊಯ್ದಿದ್ದಾರೆ. 2015 ರಲ್ಲಿ ಅಂತರಾ ಬೆಂಗಳೂರಲ್ಲಿ ಕೆಲಸ ಮಾಡ್ತಾ ಇದ್ಲು, ಆಗ ಆಕೆಗೆ ಗುಪ್ತಾ ಪರಿಚಯವಾಗಿದ್ದ. ಈ ವರ್ಷ ಏಪ್ರಿಲ್ ನಲ್ಲಿ ಆಕೆ ಪುಣೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ಲು. ತನಗೆ ಪ್ರಪೋಸ್ ಮಾಡುವಂತೆ ಗುಪ್ತಾ ಕರೆ ಮಾಡಿ ಆಕೆಗೆ ಬೆದರಿಸುತ್ತಿದ್ದ. ಈ ಬಗ್ಗೆ ಅಂತರಾ ಪೊಲೀಸರಿಗೂ ಮಾಹಿತಿ ನೀಡಿದ್ದಳು. ಪೊಲೀಸರಿಗೂ ದೂರು ನೀಡಲಾಗಿತ್ತು. ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿ ಬೆದರಿಸುತ್ತಿದ್ದ ಗುಪ್ತಾ ಅವಳನ್ನು ಕೊಲ್ಲಲು ಪ್ಲಾನ್ ಮಾಡಿದ್ದಾನೆ, ಇದಕ್ಕಾಗಿ ಬೇರೊಬ್ಬನಿಗೆ ಸುಪಾರಿ ಕೊಟ್ಟಿದ್ದಾನೆ. ಗುಪ್ತಾ ಸೂಚನೆಯಂತೆ ಅಂತರಾಳನ್ನು ಹತ್ಯೆ ಮಾಡಿದ ಆರೋಪಿ ಇನ್ನೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...