alex Certify
ಕನ್ನಡ ದುನಿಯಾ       Mobile App
       

Kannada Duniya

ಮೇ 2 ರಿಂದ PUC ತರಗತಿ, ಹೆಚ್ಚಾಯ್ತು ಆಕ್ರೋಶ

ಬೆಂಗಳೂರು: ಮೇ 2 ರಿಂದ ಪಿ.ಯು.ಸಿ. ತರಗತಿಗಳನ್ನು ಆರಂಭಿಸಲು ಸುತ್ತೋಲೆ ಹೊರಡಿಸಿರುವುದಕ್ಕೆ ಉಪನ್ಯಾಸಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದಲ್ಲಿ ಮೇ ತಿಂಗಳಲ್ಲಿ ನೆತ್ತಿ ಸುಡುವ ಬಿಸಿಲಿರುತ್ತದೆ. ಕೆಲಸ ಮಾಡುವುದಿರಲಿ, ನಡೆದಾಡಲು ಕೂಡ ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಉತ್ಸಾಹದಲ್ಲಿ ಹೊಸ ನಿಯಮಾವಳಿ ರೂಪಿಸಿದ್ದಾರೆ. ಆದರೆ, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ನಿಯಮ ರೂಪಿಸಿರುವ ಅವರು, ಒಮ್ಮೆ ಉತ್ತರ ಕರ್ನಾಟಕದ ರಸ್ತೆಗಳಲ್ಲಿ ಓಡಾಡಲಿ, ಬಿಸಿಲಿನ ಬಗ್ಗೆ ಗೊತ್ತಾಗುತ್ತದೆ ಎಂದು ಉಪನ್ಯಾಸಕರು ಹೇಳಿದ್ದಾರೆ.

ಈ ಬಾರಿ ಚುನಾವಣೆ ಕಾರಣದಿಂದ ಬೇಗನೆ ಪರೀಕ್ಷೆಗಳು ಮುಗಿದಿವೆ. ಪ್ರಥಮ ಪಿ.ಯು.ಸಿ. ಪರೀಕ್ಷೆ ಫೆಬ್ರವರಿ 21 ಕ್ಕೆ ಮುಗಿದಿದ್ದು, 69 ರಜಾ ದಿನ ದೊರೆತಿದೆ. ದ್ವಿತೀಯ ಪಿ.ಯು.ಸಿ. ಪರೀಕ್ಷೆ ಮಾರ್ಚ್ 17 ಕ್ಕೆ ಮುಗಿದಿದ್ದು, 45 ರಜಾ ದಿನ ಸಿಕ್ಕಿದೆ. ಜೂನ್ 1 ರಿಂದ ತರಗತಿ ಆರಂಭಿಸಿದಲ್ಲಿ ಸುಮಾರು 100 ದಿನಗಳ ಕಾಲ ಸುದೀರ್ಘ ರಜೆ ಸಿಕ್ಕಂತಾಗುತ್ತದೆ. ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಓದಿದ್ದನ್ನು ಮರೆಯುತ್ತಾರೆ ಎನ್ನುವ ಕಾರಣದಿಂದ ಮೇ 2 ರಿಂದ ತರಗತಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಿ.ಯು. ಶಿಕ್ಷಣ ಇಲಾಖೆ ನಿರ್ದೇಶಕರು ಹೇಳಿದ್ದಾರೆ.

ಆದರೆ, ಮೇ 2 ರಿಂದಲೇ ತರಗತಿಗಳನ್ನು ಆರಂಭಿಸಲು ವಿರೋಧ ವ್ಯಕ್ತವಾಗಿದೆ. ನೀರಿನ ಸಮಸ್ಯೆ ಇರುತ್ತದೆ. ಬಿಸಿಲು, ಸೆಕೆಯಲ್ಲಿ ಪಾಠ ಮಾಡಲು, ಕೇಳಲು ಕಷ್ಟಸಾಧ್ಯ ಎಂದು ಉಪನ್ಯಾಸಕರ ವಲಯ ಹೇಳಿದೆ. ಬಸ್ ಪಾಸ್ ಇಲ್ಲದೇ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಿಲ್ಲ. ಬೇಸಿಗೆಯಲ್ಲಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಲಾಗುತ್ತದೆ. ಹೀಗಿರುವಾಗ ಕಾಲೇಜು, ತರಗತಿ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...