alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಯು ಫಲಿತಾಂಶ: ಶಿವಮೊಗ್ಗ ಜಿಲ್ಲೆಗೆ 5 ನೇ ಸ್ಥಾನ

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ 5ನೇ ಸ್ಥಾನ ಗಳಿಸಿದೆ. ಕಳೆದ ಮಾರ್ಚ್ ನಲ್ಲಿ ನಡೆಸಲಾದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪದವಿಪೂರ್ವ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ನಾಳೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು.

ಶೇ.75.77 ಫಲಿತಾಂಶದೊಂದಿಗೆ ಶಿವಮೊಗ್ಗ 5ನೇ ಸ್ಥಾನವನ್ನು ಗಳಿಸಿದೆ.
ಅರಬಿಂದೋ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಎಸ್. ಹೃತ್ವಿಕ್ 591 ಅಂಕಗಳನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿ 3 ವಿಷಯಗಳಲ್ಲಿ ಶೇ.100 ರಷ್ಟು ಅಂಕ ಗಳಿಸಿದ್ದಾರೆ. ಅದೇ ಕಾಲೇಜಿನ ವಿಜ್ಞಾನ ವಿಭಾಗದ ವಿಶ್ವಾಸ್ ಎಸ್ ಜೋಯಿಸ್ 590 ಅಂಕ, ಜಿ.ಎನ್. ಪೂಜಾ 586 ಅಂಕ, ಎಸ್.ಎಂ. ಜೀವಿಕಾ, ಆರ್.ಎನ್. ಹರ್ಷಿತ್ ಹಾಗೂ ರೀಫಾ ಅಂಜುಮ್ ತಲಾ 585 ಅಂಕ ಗಳಿಸಿದ್ದಾರೆ.

ಆದಿಚುಂಚನಗಿರಿ ಕಾಲೇಜಿನ ವಿಜ್ಞಾನ ವಿಭಾಗದ ಕೃತಿಕಾ 587 ಅಂಕ, ಸೂರಜ್ 586, ಐಶ್ವರ್ಯ 586, ಪೇಸ್ ಕಾಲೇಜಿನ ರಚನಾ ಪಿ. ಬೆನ್ನೂರು 589 ಅಂಕ ಗಳಿಸಿದ್ದು, ಕಳೆದ ಬಾರಿ ಶಿವಮೊಗ್ಗ ಜಿಲ್ಲೆ ಪಿಯು ಫಲಿತಾಂಶದಲ್ಲಿ 7ನೇ ಸ್ಥಾನ ಪಡೆದಿತ್ತು. ಈ ಬಾರಿ 5ನೇ ಸ್ಥಾನ ಗಳಿಸುವ ಮೂಲಕ 2 ಸ್ಥಾನ ಜಿಗಿತ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...