alex Certify
ಕನ್ನಡ ದುನಿಯಾ       Mobile App
       

Kannada Duniya

ಎಂ.ಎಲ್.ಸಿ. ಗಳಿಗೆ ಗೆಟೌಟ್ ಎಂದ ಉಪನ್ಯಾಸಕರು

Karnikತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ನಡೆಸುತ್ತಿರುವ ಉಪನ್ಯಾಸಕರನ್ನು ಭೇಟಿ ಮಾಡಲು ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಅರುಣ್ ಶಹಾಪುರ ಮತ್ತಿತರರು ಆಗಮಿಸಿದ ವೇಳೆ ಆಕ್ರೋಶಗೊಂಡ ಪ್ರತಿಭಟನಾಕಾರರು ಅವರಿಗೆ ಗೆಟೌಟ್ ಎಂದು ಹೇಳಿ ಹೊರ ಕಳುಹಿಸಿದ ಘಟನೆ ನಡೆದಿದೆ.

ವಿಧಾನ ಪರಿಷತ್ ಸದಸ್ಯರುಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಉಪನ್ಯಾಸಕರ ಆಕ್ರೋಶ ಅವರುಗಳ ವಿರುದ್ದ ತಿರುಗಿತಲ್ಲದೇ ನಿಮ್ಮಿಂದಲೇ ನಮಗೆ ಅನ್ಯಾಯವಾಗಿದೆ. ಈಗ ನಮ್ಮ ಕಷ್ಟ ಕೇಳಲು ಬಂದಿದ್ದೀರಾ ಎಂದು ಪ್ರಶ್ನಿಸಿದರು.

ಅಲ್ಲದೇ, ನೀವ್ಯಾರ್ರೀ ನಮ್ಮ ಕಷ್ಟ ಕೇಳೋಕೆ ಎಂದು ಹೇಳಿದ ಉಪನ್ಯಾಸಕರು, ಗೆಟೌಟ್ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿಂದಿನಿಂದ ಚಪ್ಪಲಿ ತೂರಿದ ಘಟನೆಯೂ ನಡೆಯಿತು. ಉಪನ್ಯಾಸಕರ ಆಕ್ರೋಶಕ್ಕೆ ಮಣಿದ ವಿಧಾನ ಪರಿಷತ್ ಸದಸ್ಯರುಗಳು ಬಳಿಕ ಅಲ್ಲಿಂದ ನಿರ್ಗಮಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...