alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಯು ಗಣಿತಕ್ಕೆ 21 ಕೃಪಾಂಕ ನೀಡಲು ಒಪ್ಪಿದ ಪಿಯು ಬೋರ್ಡ್

images

ಪಿಯು ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಉಂಟಾದ ಗೊಂದಲಕ್ಕೆ ಸಂಬಂಧಿಸಿದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಒಟ್ಟು 21 ಕೃಪಾಂಕಗಳನ್ನು ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ.

ಹೌದು. ಈ ವರ್ಷದ ಗಣಿತ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ಸಂಖ್ಯೆ 19 ರಿಂದ 37 ರವರೆಗಿನ ಪ್ರಶ್ನೆಗಳು ಸಿಲೆಬಸ್ ಗೆ ಹೊರತಾಗಿದ್ದವು ಎನ್ನಲಾಗಿದ್ದು, ಈ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಹಿನ್ನಲೆಯಲ್ಲಿ ಮೊದಲ ಹಂತದ ಉತ್ತರ ಪತ್ರಿಕೆಗೆ 10 ಕೃಪಾಂಕ ನೀಡಲು ನಿಶ್ಚಯಿಸಿದ್ದ ಪಿಯು ಮಂಡಳಿ ಇದೀಗ ಪೋಷಕರ ವಿರೋಧ ವ್ಯಕ್ತವಾಗುತ್ತಿದ್ದಂತೆ 21 ಅಂಕ ನೀಡಲು ನಿರ್ಧರಿಸಿದ್ದು, ಪತ್ರಿಕೆಯಲ್ಲಿ ಪ್ರಶ್ನೆ ನಮೂದಿಸಿದ ವಿದ್ಯಾರ್ಥಿಗಳಿಗೆ ಉತ್ತರ ಹೇಗಿದ್ದರೂ ಅಂಕ ನೀಡಲು ಮೌಖಿಕ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ಒಟ್ಟಾರೆ ಪಿಯು ಬೋರ್ಡ್ ನ ಈ ಅವಾಂತರಕ್ಕೆ ವಿದ್ಯಾರ್ಥಿಗಳಿಗೆ ಉಚಿತ ಅಂಕ ಲಭಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...