alex Certify
ಕನ್ನಡ ದುನಿಯಾ       Mobile App
       

Kannada Duniya

‘ಸರ್ಕಾರದ ಭಿಕ್ಷೆ ರೂಪದ ಇನ್ಕ್ರಿಮೆಂಟ್ ನಮಗೆ ಬೇಡ’

PUp 19

ಬೆಂಗಳೂರು: ಕಳೆದ 18 ದಿನಗಳಿಂದ ವೇತನ, ಭತ್ಯೆ ಹೆಚ್ಚಳ ಕುರಿತಾಗಿ, ಹೋರಾಟ ನಡೆಸುತ್ತಿದ್ದ ಪಿಯುಸಿ ಉಪನ್ಯಾಸಕರು, ಸ್ವಯಂಪ್ರೇರಿತರಾಗಿ ತಮ್ಮ ಹೋರಾಟವನ್ನು ಹಿಂತೆಗೆದುಕೊಂಡಿದ್ದಾರೆ.

ಫ್ರೀಡಂ ಪಾರ್ಕ್ ಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಉಪನ್ಯಾಸಕರೊಂದಿಗೆ ಮಾತುಕತೆ ನಡೆಸಿ ಹೋದ ಬಳಿಕ, ತಿಮ್ಮಯ್ಯ ಪುರ್ಲೆ, ದಿಢೀರ್ ಆಗಿ ಹೋರಾಟ ಹಿಂತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿದ್ದಾರೆ. ಅಲ್ಲದೇ, ನಾಳೆಯಿಂದ ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದು, ಸರ್ಕಾರ ನೀಡಿರುವುದಾಗಿ ಹೇಳಿರುವ ಒಂದು ಇನ್ಕ್ರಿಮೆಂಟ್ ನಮಗೆ ಬೇಡ. ಭಿಕ್ಷೆ ರೂಪದ ಇನ್ಕ್ರಿಮೆಂಟ್ ಅನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ನಾಳೆಯಿಂದ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ. ಇದರೊಂದಿಗೆ ಕಳೆದ 18 ದಿನಗಳಿಂದ ಉಪನ್ಯಾಸಕರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯ ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...