alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಟಿಬಿ ನಾಗರಾಜ್ ಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಹೈಟೆನ್ಷನ್ ಕಂಬವೇರಿದ ಯುವಕರು

ಮೈತ್ರಿಕೂಟ ಸರ್ಕಾರದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸ್ಥಾನ ವಂಚಿತರು ತೀವ್ರ ಆಕ್ರೋಶಗೊಂಡಿದ್ದಾರೆ. ವಿವಿಧ ರೀತಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿರುವ ಮಧ್ಯೆ, ಅವರ ಬೆಂಬಲಿಗರೂ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ತಪ್ಪಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರಾದ ಇಬ್ಬರು ಯುವಕರು, ನಿರ್ಮಾಣ ಹಂತದಲ್ಲಿದ್ದ ಹೈಟೆನ್ಷನ್ ಕಂಬವನ್ನೇರಿ ಪ್ರತಿಭಟನೆ ನಡೆಸಿದ್ದು, ಅವರನ್ನು ಕೆಳಗಿಳಿಸಲು ಈಗ ಹರಸಾಹಸ ಮಾಡಲಾಗಿದೆ.

ಕಂಬಳಿಪುರದ ರಾಮು ಹಾಗೂ ಗಂಗಾಧರ್ ನಿರ್ಮಾಣ ಹಂತದ ಹೈಟೆನ್ಷನ್ ಕಂಬವನ್ನು ಏರಿದ್ದು, ಸತತ ಪ್ರಯತ್ನದ ಬಳಿಕ ಪೊಲೀಸರು, ಅವರುಗಳ ಮನವೊಲಿಸಿ ಕಂಬದಿಂದ ಕೆಳಗಿಳಿಸಲು ಯಶಸ್ವಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...