alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಗಲಕೋಟೆ ವಿಡಿಯೋ

bagalkott

ಬಾಗಲಕೋಟೆ: ಆಸ್ತಿಯನ್ನು ಹಂಚಿಕೆ ಮಾಡದ ತಂದೆಯನ್ನು ಮಕ್ಕಳಿಬ್ಬರು ಮನಬಂದಂತೆ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ನಿಂಗಾಪುರದಲ್ಲಿ ನಡೆದಿದೆ.

ವೃದ್ಧನನ್ನು ಆತನ ಮಕ್ಕಳಿಬ್ಬರು ಥಳಿಸಿದ್ದಲ್ಲದೇ, ಬಟ್ಟೆಯಿಂದ ಕಟ್ಟಿ ಹೊತ್ತುಕೊಂಡು ಹೋಗುತ್ತಿರುವ ಅಮಾನವೀಯ ದೃಶ್ಯವನ್ನು ಅಲ್ಲಿದ್ದವರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ದೃಶ್ಯಗಳು ಮೊಬೈಲ್ ನಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಇನ್ನು ಮಕ್ಕಳಿಂದ ಥಳಿತಕ್ಕೆ ಒಳಗಾದ ವೃದ್ಧನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಆಸ್ತಿ ಹಂಚಿಕೆ ಮಾಡುವಂತೆ ಮಕ್ಕಳು ತಂದೆಗೆ ದುಂಬಾಲು ಬಿದ್ದಿದ್ದು, ಹಂಚಿಕೆ ಮಾಡದ ಕಾರಣ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗುಳೇದಗುಡ್ಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...