alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಧಾನಿಯವರ ‘ಪಕೋಡಾ’ ಹೇಳಿಕೆ ಖಂಡಿಸಿ ವಿಭಿನ್ನ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉದ್ಯೋಗ ಕುರಿತು ಪ್ರತಿಕ್ರಿಯೆ ನೀಡುವಾಗ, ಪಕೋಡಾ ಮಾರುವುದೂ ಒಂದು ಉದ್ಯೋಗ. ಅದರಿಂದಲೂ ದಿನಕ್ಕೆ 200 ರೂ. ಸಂಪಾದನೆ ಮಾಡಬಹುದು ಎಂದು ನೀಡಿದ ಹೇಳಿಕೆ ಖಂಡಿಸಿ ಸಂಘಟನೆಯೊಂದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ.

‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಛೇರಿ ಎದುರು ಪಕೋಡಾ ಮಾರಾಟ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಕಛೇರಿ ಮುಂದೆಯೇ ಬಿಸಿ ಬಿಸಿ ಪಕೋಡಾ ಕರಿದು ಮಾರಾಟ ಮಾಡಲಾಗಿದೆ.

ದೇಶದ ಪ್ರಧಾನಿಯಾದವರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರವೆಂದಿರುವ ಪ್ರತಿಭಟನಾಕಾರರು, ಪಕೋಡಾ ಮಾರುವ ಉದ್ಯೋಗವನ್ನು ಪ್ರಧಾನಿಯವರು ಸೃಷ್ಟಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದರ ಬದಲು ಇಂತಹ ಹೇಳಿಕೆ ನೀಡುವ ಮೂಲಕ ನರೇಂದ್ರ ಮೋದಿಯವರು ತಮ್ಮ ಹೊಣೆಯಿಂದ ವಿಮುಖರಾಗುತ್ತಿದ್ದಾರೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...