alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಲೆ ಏರಿಕೆ ಬಿಸಿಯಲ್ಲೂ ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿ

varamahalakshmi-puja-2012

ನಾಳೆ ವರ ಮಹಾಲಕ್ಷ್ಮಿ ಹಬ್ಬ. ಹೆಂಗೆಳೆಯರು ಇವತ್ತೇ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹೂವು-ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ಆದ್ರೆ ಈ ಬಾರಿ ವರಮಹಾಲಕ್ಷ್ಮಿ ಸಡಗರಕ್ಕೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳು ಕೂಡ ದುಬಾರಿಯಾಗಿವೆ.

ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಗುಲಾಬಿ ಹೀಗೆ ಎಲ್ಲಾ ಹೂವುಗಳ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಬಾಳೆಹಣ್ಣಿನ ದರ ಕೂಡ ದುಬಾರಿಯಾಗಿದೆ. ಆದ್ರೂ ಹಬ್ಬದ ಸಂಭ್ರಮದಲ್ಲಿ ಜನ ಖರೀದಿಗೆ ಮುಗಿಬಿದ್ದಿದ್ದಾರೆ.

ಮಲ್ಲೇಶ್ವರಂ, ಗಾಂಧಿಬಜಾರ್, ಯಶವಂತಪುರ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿದೆ. ರಸ್ತೆಗಳ ಇಕ್ಕೆಲಗಳಲ್ಲಿ ಬಾಳೆಕಂಬ ಮತ್ತು ಮಾವಿನ ತೋರಣಗಳ ಮಾರಾಟ ಭರದಿಂದ ಸಾಗಿದೆ. ಪೂಜೆಗಿಡಲು ಬೇಕಾದ ಹೂವು, ಹಣ್ಣು, ಲಕ್ಷ್ಮಿಗೆ ಉಡಿಸಲು ಸೀರೆ, ಕುಪ್ಪುಸ, ಮುಖವಾಡ ಹೀಗೆ ಪೂಜಾ ಸಾಮಗ್ರಿಗಳಿಗೆ ಭಾರೀ ಬೇಡಿಕೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...