alex Certify
ಕನ್ನಡ ದುನಿಯಾ       Mobile App
       

Kannada Duniya

‘ನನ್ನ ಗಂಡನನ್ನು ಕೊಲ್ಲು, ನನ್ನನ್ನು ವಿಧವೆ ಮಾಡು’

ಬೆಂಗಳೂರು: ಬನಶಂಕರಿ ದೇವಾಲಯದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಎಣಿಕೆ ಸಂದರ್ಭದಲ್ಲಿ ಸಿಕ್ಕ ಚೀಟಿಗಳನ್ನು ಕಂಡು ಅಲ್ಲಿದ್ದವರು ಶಾಕ್ ಆಗಿದ್ದಾರೆ.

ಮಹಿಳೆಯೊಬ್ಬಳು ತನ್ನನ್ನು ವಿಧವೆಯನ್ನಾಗಿ ಮಾಡುವಂತೆ ದೇವಿಯ ಬಳಿ ಬೇಡಿಕೊಂಡಿದ್ದಾರೆ. ನನ್ನ ಗಂಡನ ಅಟ್ಟಹಾಸವನ್ನು ಅಡಗಿಸು. ಗಂಡ ಸಾಯಲಿ. ನನ್ನ ಮಗ ಮತ್ತು ನನ್ನನ್ನು ನೆಮ್ಮದಿಯಾಗಿ ಇಡು ತಾಯಿ. ಮನಸಿನ್ನಲ್ಲಿರುವ ಇಷ್ಟಾರ್ಥ ನೆರವೇರಿಸು. ಗಂಡನಿಗೆ ಸಾವು ಕೊಟ್ಟು ನನ್ನನ್ನು ರಕ್ಷಿಸು ಎಂದು ಬೇಡಿಕೊಂಡಿದ್ದಾರೆ.

ಮತ್ತೊಂದು ಪತ್ರವನ್ನು ಬರೆದ ಯುವಕನೊಬ್ಬ, ದೇವಿ ನಾನು ಮೊಬೈಲ್ ನಲ್ಲಿ ವಾಟ್ಸಾಪ್ ಅನ್ ಇನ್ ಸ್ಟಾಲ್ ಮಾಡ್ತೇನೆ. ಇನ್ಮೇಲೆ ಗೆಳತಿಯರು, ಅತ್ತೆ ಮಗಳೊಂದಿಗೆ ಚಾಟ್ ಮಾಡಲ್ಲ. ಕೆಟ್ಟ ವಿಡಿಯೋ ನೋಡಲ್ಲ, ಧೂಮಪಾನ, ಮದ್ಯಪಾನದಿಂದ ದೂರವಿರುತ್ತೇನೆ ಎಂದು ಚೀಟಿಯಲ್ಲಿ ಬರೆದು ಹುಂಡಿಗೆ ಹಾಕಿದ್ದಾನೆ.

ಕಾಣಿಕೆ ಹುಂಡಿಯಲ್ಲಿ ಹೀಗೆ ಚಿತ್ರ ವಿಚಿತ್ರ ಬೇಡಿಕೆಗಳ ಚೀಟಿಯನ್ನು ಕಂಡು ಎಣಿಕೆಗೆ ಬಂದವರು ದಂಗಾಗಿ ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...