alex Certify
ಕನ್ನಡ ದುನಿಯಾ       Mobile App
       

Kannada Duniya

ವೋಟರ್ ಐಡಿಯನ್ನು ಆಧಾರ್‌ ಜೊತೆ ಲಿಂಕ್ ಮಾಡಲು ಕೋರಿ ಸಂಸದರ ಟ್ವೀಟ್

ಬೆಂಗಳೂರು: ವೋಟರ್ ಐಡಿಯನ್ನು ಆಧಾರ್‌ನೊಂದಿಗೆ ಜೋಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಮತದಾರರ ಪಟ್ಟಿಯಲ್ಲಿ ದೋಷಗಳಿದ್ದು, ನಕಲಿ ಮತದಾರರಿದ್ದಾರೆ. ಮೈಸೂರು ನಗರಪಾಲಿಕೆಗೆ ಚುನಾವಣೆ ಮುಗಿಯಿತು. ಆದರೆ ನಕಲಿ ಮತದಾನ ತಡೆಯಲು ಸಾಧ್ಯವಾಗಿಲ್ಲ. ನಕಲಿ ಮತದಾರರ ಹೆಸರು ಪಟ್ಟಿಯಲ್ಲಿದೆ ಮತ್ತು ಅವರು ಮತದಾರರ ಗುರುತು ಚೀಟಿ ಕೂಡ ಹೊಂದಿದ್ದಾರೆ.

ಆದರೆ ಅವರ ವಿಳಾಸಕ್ಕೆ ಹೋಗಿ ಪರಿಶೀಲಿಸಿದರೆ ಖಾಲಿ ಸೈಟ್ ಕಾಣಿಸುತ್ತದೆ.  ಹೀಗಾಗಿ ನಕಲಿ ಮತದಾನ ತಡೆಯಲು ದಯವಿಟ್ಟು ವೋಟರ್ ಐಡಿಯನ್ನು ಆಧಾರ್ ಜತೆ ಜೋಡಿಸಿ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ಪ್ರಧಾನಿಗೆ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಶುಕ್ರವಾರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಲವೆಡೆ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗಿವೆ. ಇದರಿಂದಾಗಿ ಕೆಲವರು ಮತವಂಚಿತರಾದರೆ ಮತ್ತೆ ಕೆಲವರು ಹೆಸರು ಇಲ್ಲದಿದ್ದರಿಂದ ಮತ ಹಾಕಲು ಸಾಧ್ಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...