alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎಂ. ಸಿದ್ಧರಾಮಯ್ಯ ಅಲ್ಲ, ಸಿದ್ಧರಾವಣ : ಪ್ರತಾಪ್ ಸಿಂಹ

ಮೈಸೂರು: ಸಿ.ಎಂ. ಸಿದ್ಧರಾಮಯ್ಯ ಅವರು ತಮ್ಮ ಹೆಸರನ್ನು ಸಿದ್ಧರಾಮಯ್ಯ ಬದಲಿಗೆ ಸಿದ್ಧರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಸಿ.ಎಂ. ಅವರಿಗೆ ರಾವಣನ ಗುಣಗಳು ಹೆಚ್ಚಾಗಿವೆ. ಎಲ್ಲದಕ್ಕೂ ನಾನು, ನನ್ನದು, ನನ್ನಿಂದಲೇ ಎಂದು ರಾವಣ ಹೇಳುತ್ತಿದ್ದ. ಅದೇ ರೀತಿ ಸಿ.ಎಂ. ಹೇಳುತ್ತಿದ್ದಾರೆ. ಹಾಗಾಗಿ ಅವರು ಹೆಸರನ್ನು ಬದಲಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಯವರು ಮೈಸೂರು ಮಹಾರಾಜರಿಗೆ ತಮ್ಮನ್ನು ಹೋಲಿಸಿಕೊಂಡು, ಉತ್ತಮ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮಹಾರಾಜರೇನು ಸ್ವಂತ ಹಣದಿಂದ ಮಾರ್ಕೇಟ್ ಕಟ್ಟಿರಲಿಲ್ಲ ಎಂದು ಹೇಳುವ ಸಿ.ಎಂ. ಅವರೇನು ಸ್ವಂತ ಹಣದಿಂದ ಕಟ್ಟಡ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಎಲ್ಲದಕ್ಕೂ ತಾವು, ತಮ್ಮಿಂದಲೇ ಎಂದು ಹೇಳುವ ಸಿ.ಎಂ. ಸಿದ್ಧರಾಮಯ್ಯ ಅವರ ದರ್ಪ ಇನ್ನೇನು ಕೊನೆಯಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...