alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯದಶಮಿ ದಿನದಂದೇ ಮೈಸೂರು ಒಡೆಯರ್ ಕುಟುಂಬಕ್ಕೆ ಮತ್ತೊಂದು ಶಾಕ್

ಇಂದು ನಾಡಿನಾದ್ಯಂತ ವಿಜಯ ದಶಮಿ ಸಂಭ್ರಮ ಮನೆ ಮಾಡಿರುವ ಮಧ್ಯೆ, ಮೈಸೂರಿನಲ್ಲೂ ಅದ್ದೂರಿ ದಸರಾ ನಡೆದಿದೆ. ಆದರೆ ಇದೇ ಸಂದರ್ಭದಲ್ಲಿ ರಾಜ ಮನೆತನದ ಕುಟುಂಬದಲ್ಲಿ ಎರಡು ಸಾವು ಸಂಭವಿಸಿರುವುದು ರಾಜ ಕುಟುಂಬಕ್ಕೆ ಆಘಾತ ತಂದಿದೆ.

ರಾಜ ಮಾತೆ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ 98 ವರ್ಷದ ಪುಟ್ಟ ಚೆನ್ನಮ್ಮಣ್ಣಿ, ದೀರ್ಘಕಾಲದ ಅನಾರೋಗ್ಯದ ಬಳಿಕ ಇಂದು ಸಾವನ್ನಪ್ಪಿದ್ದರ ನೋವಿನ ನಡುವೆ ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಸಹೋದರಿ ವಿಶಾಲಕ್ಷಿ ಅವರೂ ಕೂಡ ವಿಧಿವಶರಾಗಿದ್ದಾರೆ.

ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 58 ವರ್ಷದ ವಿಶಾಲಾಕ್ಷಿಯವರು ಇಂದು ಸಂಜೆ ನಿಧನರಾಗಿದ್ದು, ವಿಜಯ ದಶಮಿ ಸಂದರ್ಭದಲ್ಲಿ ರಾಜ ಕುಟುಂಬದಲ್ಲಿ ಸಂಭವಿಸಿರುವ 2 ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...