alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದಲ್ಲಿ ಸದ್ದಿಲ್ಲದೇ ಶುರುವಾಗಿದೆ ಲೋಡ್ ಶೆಡ್ಡಿಂಗ್…!?

ಬೇಸಿಗೆಯಲ್ಲಿ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತಾದರೂ, ರಾಜ್ಯದಲ್ಲಿ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿಯಾಗ್ತಿದೆ ಎಂಬ ದೂರು ಕೇಳಿ ಬಂದಿವೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಅನೇಕ ಭಾಗದಲ್ಲಿ ಅಕಾಲಿಕವಾಗಿ ಮಳೆಯಾಗ್ತಿದೆ. ಹಲವೆಡೆ ಮರಗಳು ಬಿದ್ದು, ವಿದ್ಯುತ್ ಲೈನ್ ಗಳಿಗೆ ಹಾನಿಯಾಗಿದೆ. ಮಳೆ, ಗಾಳಿ ನೆಪವೊಡ್ಡಿ ಆಗಾಗ ವಿದ್ಯುತ್ ಕಡಿತ ಮಾಡಲಾಗ್ತಿದೆ.

ವಿಧಾನಸಭೆ ಚುನಾವಣೆ ಮತ್ತು ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯುತ್ ಕಡಿತ ಮಾಡದಿರಲು ಸರ್ಕಾರ ಕ್ರಮಕೈಗೊಂಡಿದೆ. ಆದರೆ, ಸದ್ದಿಲ್ಲದೇ ವಿದ್ಯುತ್ ಕಡಿತ ಮಾಡಲಾಗ್ತಿದೆ. ಬೇಸಿಗೆ ಆರಂಭದಲ್ಲೇ ವಿದ್ಯುತ್ ಕಡಿತ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಕಡಿತ ಅವಧಿ ಇನ್ನೂ ಜಾಸ್ತಿಯಾಗಬಹುದಾಗಿದೆ.

ಪರೀಕ್ಷೆ ಮುಗಿದ ಬಳಿಕ ವಿದ್ಯುತ್ ಕಡಿತ ಮಾಡುವ ಅವಧಿ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಜಾಸ್ತಿ. ಇದೇ ವೇಳೆ ವಿದ್ಯುತ್ ಕಡಿತ ಮಾಡಿದಲ್ಲಿ ಜನರಿಗೆ ತೊಂದರೆ ತಪ್ಪಿದ್ದಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...