alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡಿಎನಲ್ಲಿ ಶಾಸಕರಿಗಿಂತ ನಟಿ ಪೂಜಾಗಾಂಧಿಯೇ ಪವರ್ಫುಲ್…!

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶಾಸಕರುಗಳಿಗಿಂತ ನಟಿ ಪೂಜಾ ಗಾಂಧಿಯವರೇ ಅತ್ಯಂತ ಪ್ರಭಾವಿ ಎಂಬ ಮಾತುಗಳು ಕೆಲ ಶಾಸಕರುಗಳಿಂದಲೇ ಈಗ ಕೇಳಿ ಬರುತ್ತಿದೆ.

ಬಿಡಿಎ ಆಯುಕ್ತ ರಾಕೇಶ್ ಸಿಂಗ್, ನಾವು ಹೇಳುವ ಫೈಲ್ ಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ನಟಿ ಪೂಜಾ ಗಾಂಧಿ ಕಡೆಯಿಂದ ಬರುವ ಫೈಲ್ ಗಳಿಗೆ ಆದ್ಯತೆ ನೀಡಿ ಕೆಲಸ ಮಾಡಿಕೊಡುತ್ತಾರೆ ಎಂಬುದು ಬೆಂಗಳೂರಿನ ಕೆಲ ಕಾಂಗ್ರೆಸ್ ಶಾಸಕರುಗಳ ಅಳಲಾಗಿದೆ.

ಈ ಹಿನ್ನಲೆಯಲ್ಲಿ ರಾಕೇಶ್ ಸಿಂಗ್ ಅವರನ್ನು ವರ್ಗಾಯಿಸಬೇಕೆಂದು ದೋಸ್ತಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಈ ಶಾಸಕರುಗಳು ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...