alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಿಕಾರ ಬೆಂಗಳೂರು ನಿವಾಸಕ್ಕೆ ಟೈಟ್ ಸೆಕ್ಯೂರಿಟಿ

ಪದ್ಮಾವತಿ ಚಿತ್ರದ ವಿವಾದದ ಹಿನ್ನೆಲೆಯಲ್ಲಿ ನಟಿ ದೀಪಿಕಾ ಪಡುಕೋಣೆಗೆ ಜೀವ ಬೆದರಿಕೆ ಹಾಕಲಾಗಿದೆ. ಹಾಗಾಗಿ ಬೆಂಗಳೂರಿನಲ್ಲಿರುವ ದೀಪಿಕಾ ಹೆತ್ತವರ ಮನೆಗೂ ಬಿಗಿ ಭದ್ರತೆ ಒದಗಿಸಲಾಗಿದೆ. ಜೆಸಿ ನಗರದಲ್ಲಿರುವ ದೀಪಿಕಾ ಪೋಷಕರ ಮನೆ ಮುಂದೆ ಭದ್ರತೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.

ಸದ್ಯ ದೀಪಿಕಾ ಮುಂಬೈನಲ್ಲಿ ಸೆಟಲ್ ಆಗಿದ್ರೂ, ಮೂಲತಃ ಬೆಂಗಳೂರಿನವರು. ತಂದೆ ಪ್ರಕಾಶ್ ಪಡುಕೋಣೆ, ತಾಯಿ ಉಜ್ಜಲ, ಸಹೋದರಿ ಅನಿಶಾ ಹಾಗೂ ಅಜ್ಜಿ ಅಹಲ್ಯ ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಪ್ರಕಾಶ್ ಪಡುಕೋಣೆ ಬೆಂಗಳೂರಿನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಯೊಂದನ್ನು ನಡೆಸುತ್ತಿದ್ದಾರೆ.

ಪದ್ಮಾವತಿ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿರುವ ದೀಪಿಕಾ ಪಡುಕೋಣೆಯ ಶಿರಚ್ಛೇದ ಮಾಡಿದವರಿಗೆ 10 ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಬಿಜೆಪಿ ಮುಖಂಡ ಕನ್ವರ್ ಸೂರಜ್ಪಾಲ್ ಸಿಂಗ್ ಘೋಷಿಸಿದ್ದರು. ಇನ್ನು ಕೆಲವು ಸಂಘಟನೆಗಳು ಕೂಡ ದೀಪಿಕಾರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ದೀಪಿಕಾರ ತಂದೆ ಮನೆಗೂ ಭದ್ರತೆ ಒದಗಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...