alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕರೆದುರೇ ಕೈಕೈ ಮಿಲಾಯಿಸಿದ್ದ ಪಿಎಸ್ಐಗಳ ಸಸ್ಪೆಂಡ್

suspended-1-620x413

ಬೆಂಗಳೂರು: ಠಾಣೆಯಲ್ಲಿ ಸುಗಮವಾಗಿ ಕೆಲಸ ಕಾರ್ಯ ನಡೆಸಲು ಪರಸ್ಪರ ಸಹಕಾರ ಮನೋಭಾವ, ಹೊಂದಾಣಿಕೆ ತೋರಬೇಕಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು, ತಮ್ಮ ಹುದ್ದೆಯ ಘನತೆಯನ್ನೇ ಮರೆತು, ಹೊಡೆದಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾರ್ವಜನಿಕರ ಎದುರಿನಲ್ಲೇ ತಾಳ್ಮೆ ಕಳೆದುಕೊಂಡ ಇಬ್ಬರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಠಾಣೆಯಲ್ಲೇ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದು, ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಹನುಮಂತನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಗಣೇಶ್ ಕುಮಾರ್ ಹಾಗೂ ಲಿಂಗಪ್ಪ ಅವರು ಹೊಡೆದಾಡಿಕೊಂಡವರು. ಠಾಣೆಯಲ್ಲಿ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ತಾಳ್ಮೆ ಕಳೆದುಕೊಂಡ ಇಬ್ಬರೂ ಜಗಳವಾಡುತ್ತಾ ರೋಡಿಗೆ ಬಂದಿದ್ದಾರೆ.

ರಸ್ತೆಯಲ್ಲೇ ಕೈಕೈ ಮಿಲಾಯಿಸಿ ಜಗಳವಾಡಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಕರಣದ ತನಿಖೆ ನಡೆಸಿ, ಇಬ್ಬರನ್ನೂ ಸಸ್ಪೆಂಡ್ ಮಾಡಿದ್ದಾರೆ. ಹಿರಿಯ ಅಧಿಕಾರಿಗೆ ಠಾಣೆಯ ಉಸ್ತುವಾರಿ ವಹಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...