alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಬುರ್ಖಾಧಾರಿ ಪುರುಷನ ಕರಾಮತ್ತು

Burka-Women

ಶಿವಮೊಗ್ಗ: ಕಳವು ಮಾಡುವವರು ಹೇಗೆಲ್ಲಾ ವೇಷ ಧರಿಸಿ ಬರುತ್ತಾರೆ ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ. ಬುರ್ಖಾ ಧರಿಸಿ ಯಾರಿಗೂ ಅನುಮಾನ ಬಾರದಂತೆ ಮಹಿಳೆಯರ ಪರ್ಸ್, ಬ್ಯಾಗ್ ಅಪಹರಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬುರ್ಖಾ ಧರಿಸಿದ ವ್ಯಕ್ತಿ ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಕಂಡ ಸಾರ್ವಜನಿಕರು ಹಿಡಿದು ಪ್ರಶ್ನಿಸಿದಾಗ, ಬುರ್ಖಾ ವೇಷದಲ್ಲಿ ಪುರುಷ ಇರುವುದು ಗೊತ್ತಾಗಿದೆ. ಬೆಂಗಳೂರಿನ ಮ್ಯಾಥ್ಯೂ ಎಂಬಾತನೇ ಬುರ್ಖಾ ಧರಿಸಿ ಸಿಕ್ಕಿಬಿದ್ದ ಆರೋಪಿ. ಈತ ಹೆಣ್ಣುಮಕ್ಕಳಂತೆ ಬುರ್ಖಾ ಧರಿಸಿ ಕಳವು ಮಾಡುತ್ತಿದ್ದ. ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದ ಯಡೇಹಳ್ಳಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮ್ಯಾಥ್ಯೂನನ್ನು ಹಿಡಿದ ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಆತ ಸರಿಯಾದ ಮಾಹಿತಿ ನೀಡದ ಕಾರಣ, ಸಾಗರ ಗ್ರಾಮಾಂತರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮ್ಯಾಥ್ಯೂ ಮಹಿಳೆಯರ ಪರ್ಸ್ ಕದ್ದು, ಎಟಿಎಂಗಳಿಂದಲೂ ಹಣ ಎಗರಿಸುತ್ತಿದ್ದ. ಎಟಿಎಂ ಸಿಸಿ ಕ್ಯಾಮೆರಾದಲ್ಲಿ ಬುರ್ಖಾ ಧರಿಸಿದವರು ಹಣ ಡ್ರಾ ಮಾಡಿದ ದೃಶ್ಯ ಕಂಡು ಬಂದಿದ್ದರಿಂದ ಆರೋಪಿಯನ್ನು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಇದೀಗ ಬುರ್ಖಾಧಾರಿಯ ಕರಾಮತ್ತು ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...