alex Certify
ಕನ್ನಡ ದುನಿಯಾ       Mobile App
       

Kannada Duniya

‘ಪೋಲಿ’ಸ್ ಪ್ರಣಯ ಪ್ರಸಂಗ

street

ಮಂಡ್ಯ: ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋಗುವುದೇ ಕಷ್ಟಸಾಧ್ಯ ಎನ್ನುವಂತಾಗಿದೆ. ಅದರಲ್ಲೂ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಹೋಗಿ ಬರುವುದನ್ನೇ ಕಾಯುವ ಕೆಲವರು ಪೀಡಿಸುತ್ತಾರೆ. ಪೋಲಿ ಹುಡುಗರು ಪೀಡಿಸುವುದು ಸಾಮಾನ್ಯ ಎನ್ನಬಹುದು. ಆದರೆ,

ಪೊಲೀಸ್ ಪೇದೆಯೇ ವಿದ್ಯಾರ್ಥಿನಿಯೊಬ್ಬರನ್ನು ಪೀಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಬೆಸ್ಕಾಂ ಜಾಗೃತ ದಳದಲ್ಲಿ ಕೆಲಸ ಮಾಡುವ ಪೇದೆಯೊಬ್ಬ, ಕಾಲೇಜು ವಿದ್ಯಾರ್ಥಿನಿಯನ್ನು ಪ್ರತಿ ದಿನ ಪೀಡಿಸುತ್ತಿದ್ದ. ಅಲ್ಲದೇ, ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ ತನ್ನನ್ನು ಪ್ರೀತಿಸುವಂತೆ ಕಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಅವರ ಮನೆ ಎದುರಿನ ಟೈಲರ್ ಅಂಗಡಿಯಲ್ಲಿ ಕುಳಿತು ಯುವತಿಯನ್ನು ಪೀಡಿಸುತ್ತಿದ್ದ ಪೇದೆಯನ್ನು ವಿದ್ಯಾರ್ಥಿನಿ ತಂದೆ ಪ್ರಶ್ನಿಸಿದ್ದಾರೆ.

ಆಗ ಪೊಲೀಸ್, ವಿದ್ಯಾರ್ಥಿನಿ ತಂದೆಯ ಮೇಲೆ ಹಲ್ಲೆ ಮಾಡಿ, ಕತ್ತರಿಯಿಂದ ಇರಿಯಲು ಮುಂದಾಗಿದ್ದಾನೆ. ಇದನ್ನು ಕಂಡ ಸ್ಥಳೀಯರು, ‘ಪೋಲಿ’ ಪೊಲೀಸ್ ಪೇದೆಯನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...