alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ಬೆಂಗಳೂರು : ಚುನಾವಣೆ ಆಯೋಗದ ಸೂಚನೆಯಂತೆ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಮೈಸೂರು ಎಸ್.ಪಿ. ರವಿ ಡಿ. ಚನ್ನಣ್ಣನವರ್ ಸೇರಿದಂತೆ, ಹಲವಾರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ರವಿ ಚನ್ನಣ್ಣನವರ್ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಡಿ.ಸಿ.ಪಿ.ಯಾಗಿ ನಿಯೋಜಿಸಲಾಗಿದೆ. ಕೇಂದ್ರ ವಲಯ ಐ.ಜಿ.ಪಿ.ಯಾಗಿ ಬಿ. ದಯಾನಂದ್, ಆಡಳಿತ ವಿಭಾಗದ ಐ.ಜಿ.ಪಿ.ಯಾಗಿ ಅಮೃತ್ ಪ್ರಸಾದ್, ದಕ್ಷಿಣ ವಲಯದ ಐ.ಜಿ.ಪಿ.ಯಾಗಿ ಸೌಮೇಂದು ಮುಖರ್ಜಿ ಅವರನ್ನು ವರ್ಗಾವಣೆ ಮಾಡಲಾಗಿದೆ.

ಬಳ್ಳಾರಿ ವಲಯ ಐ.ಜಿ.ಪಿ.ಯಾಗಿ ಎಸ್. ರವಿ, ಪೊಲೀಸ್ ಅಕಾಡೆಮಿ ನಿರ್ದೇಶಕರಾಗಿ ವಿಫುಲ್ ಕುಮಾರ್, ಕೆ.ಎಸ್.ಆರ್.ಟಿ.ಸಿ. ಭದ್ರತೆ –ವಿಚಕ್ಷಣ ದಳ ವಿಭಾಗದ ನಿರ್ದೇಶಕರಾಗಿ ಎನ್. ಶಿವಪ್ರಸಾದ್, ಮೈಸೂರು ಎಸ್.ಪಿ.ಯಾಗಿ ಅಮಿತ್ ಸಿಂಗ್, ಸಿ.ಐ.ಡಿ. ಎಸ್.ಪಿ.ಯಾಗಿ ಅನುಚೇತ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಕೆ.ಎಸ್.ಆರ್.ಪಿ. ಕಮಾಡೆಂಟ್ ಆಗಿ ಕುಲದೀಪ್ ಕುಮಾರ್, ವಿಜಯಪುರ ಎಸ್.ಪಿ.ಯಾಗಿ ನಿಕಮ್ ಕುಮಾರ್, ಬೆಂಗಳೂರು ಗ್ರಾಮಾಂತರ ಎಸ್.ಪಿ.ಯಾಗಿ ಭೀಮಾ ಶಂಕರ್ ಗುಳೇದ್, ಬೆಂಗಳೂರು ಎ.ಸಿ.ಬಿ.ಯಾಗಿ ರಾಧಿಕಾ, ಬೆಂಗಳೂರು ಗುಪ್ತದಳದ ಎಸ್.ಪಿ.ಯಾಗಿ ಅನೂಪ್ ಶೆಟ್ಟಿ, ಕೊಪ್ಪಳ ಎಸ್.ಪಿ.ಯಾಗಿ ರೇಣುಕಾ ಸುಕುಮಾರ್, ಮಂಡ್ಯ ಎಸ್.ಪಿ.ಯಾಗಿ ಗಿರೀಶ್, ಬೆಂಗಳೂರು ಈಶಾನ್ಯ ವಿಭಾಗದ ಡಿ.ಸಿ.ಪಿ.ಯಾಗಿ ಕಲಾ ಕೃಷ್ಣಮೂರ್ತಿ ಅವರನ್ನು ವರ್ಗಾವಣೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...