alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರಿ ಜೊತೆಗಿನ ಸರಸದಿಂದ ಯಡವಟ್ಟಾಯ್ತು

Crime 21a

ಬೆಂಗಳೂರು: ಸುಂದರ ಯುವತಿಯರನ್ನು ಮುಂದಿಟ್ಟುಕೊಂಡು ಉದ್ಯಮಿಗಳು, ಅಧಿಕಾರಿಗಳನ್ನು ಬಲೆಗೆ ಬೀಳಿಸಿ, ಹಣಕ್ಕಾಗಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಪೋಲಿ ಪೊಲೀಸರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪೇದೆಗಳಾಗಿರುವ ವಿಜಯಕುಮಾರ್, ಬಸವರಾಜ್, ಮಹಮ್ಮದ್ ಇಲಿಯಾಸ್ ಹಾಗೂ ಅವರ ಸಹಚರರಾಗಿದ್ದ ನಿಶಾ ಮತ್ತು ಕ್ರಿಸ್ಟಿನ್ ಬಂಧಿತ ಆರೋಪಿಗಳು. ಇವರು ರಿಯಲ್ ಎಸ್ಟೇಟ್ ಉದ್ಯಮಿಗಳು, ಶ್ರೀಮಂತರು ಹಾಗೂ ಅಧಿಕಾರಿಗಳನ್ನು ವಂಚಿಸುತ್ತಿದ್ದರು. ‘ಹನಿ ಟ್ರ್ಯಾಪ್’ ಮೂಲಕ ಸುಂದರಿಯರನ್ನು ಮುಂದಿಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಪೀಡಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲಿಗೆ ವ್ಯವಹಾರದ ನೆಪದಲ್ಲಿ ಮಾತುಕತೆಗೆ ಅಪಾರ್ಟ್ ಮೆಂಟ್ ಗೆ ಆಹ್ವಾನಿಸುತ್ತಿದ್ದರು. ಅಲ್ಲಿ ಸುಂದರಿಯರು ಅವರೊಂದಿಗೆ ಸಲುಗೆಯಿಂದ ವರ್ತಿಸಿ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಅವರು ಮೈಮರೆತು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ, ಸಿಸಿಬಿ ಪೊಲೀಸರೆಂದು ಈ ಪೊಲೀಸರು ನಕಲಿ ದಾಳಿ ಮಾಡುತ್ತಿದ್ದರು.

ಅಲ್ಲದೇ, ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು, ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅವರಿಂದ ಹಣ ಪಡೆದುಕೊಳ್ಳುತ್ತಿದ್ದರು. ಹೀಗೆ ಉದ್ಯಮಿಯೊಬ್ಬರಿಂದ ಪದೇ ಪದೇ ಹಣ ಪಡೆದುಕೊಂಡಿದ್ದು, ಇದರಿಂದ ಬೇಸತ್ತು ಹೋದ ಅವರು, ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಈ ಕೃತ್ಯವನ್ನು ಬಯಲಿಗೆಳೆದಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...