alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಾರೋಪಿಗಳು ಸೇರಿದಂತೆ 12 ಮಂದಿ ಅರೆಸ್ಟ್

arrest196ಒಬ್ಬಂಟಿಯಾಗಿ ಹೋಗುತ್ತಿರುವವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ ಹಣ, ಆಭರಣ, ಮೊಬೈಲ್ ದೋಚುತ್ತಿದ್ದ 12 ಮಂದಿಯನ್ನು ಬೆಂಗಳೂರು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ಪೈಕಿ 6 ಮಂದಿ ಬಾಲಾರೋಪಿಗಳೆಂದು ತಿಳಿದುಬಂದಿದೆ.

ಐಷಾರಾಮಿ ಜೀವನ ನಡೆಸಲು ಈ ಮಾರ್ಗ ಕಂಡುಕೊಂಡಿದ್ದ ಆರೋಪಿಗಳು ಒಬ್ಬಂಟಿಯಾಗಿ ಹೋಗುವವರನ್ನು ಟಾರ್ಗೆಟ್ ಮಾಡುತ್ತಿದ್ದರಲ್ಲದೆ ಮನೆ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದರೆಂದು ಹೇಳಲಾಗಿದೆ.

ಒಟ್ಟು 17 ಪ್ರಕರಣಗಳಲ್ಲಿ ಇವರುಗಳು ಭಾಗಿಯಾಗಿದ್ದಾರೆನ್ನಲಾಗಿದ್ದು, ಆರೋಪಿಗಳಿಂದ ಮೊಬೈಲ್ ಫೋನ್ ಗಳು, ಹೋಮ್ ಥಿಯೇಟರ್ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹೋಂಡಾ ಡಿಯೋ ವಾಹನಗಳನ್ನು ಕದ್ದು, ನಂಬರ್ ಪ್ಲೇಟ್ ಬದಲಿಸಿ ರಾಬರಿ ನಡೆಸುತ್ತಿದ್ದರೆಂದು ಹೇಳಲಾಗಿದೆ.

ಜೆ.ಪಿ. ನಗರ ವ್ಯಾಪ್ತಿಯ ಸಾರಕ್ಕಿ ಮೊದಲಾದ ಕಡೆ ಈ ತಂಡ ದುಷ್ಕೃತ್ಯ ಎಸಗುತ್ತಿದ್ದು, ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಆಧರಿಸಿ ಮೊದಲಿಗೆ ಐವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ಬಳಿಕ ಮಿಕ್ಕವರನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...