alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲೆ ನಡೆಸಿದ್ದ 5 ಮಂದಿ ಅರೆಸ್ಟ್, ನಲಪಾಡ್ ಹ್ಯಾರಿಸ್ ಗೆ ಶೋಧ

ಬೆಂಗಳೂರು: ಯುಬಿ ಸಿಟಿಯಲ್ಲಿ ಮತ್ತು ಮಲ್ಯ ಆಸ್ಪತ್ರೆಯಲ್ಲಿ ಯುವಕ ವಿದ್ವತ್ ಮೇಲೆ ತೀವ್ರತರವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕೃಷ್ಣ, ಮಂಜುನಾಥ್, ಅಭಿಶೇಕ್, ಅರುಣ್ ಸೇರಿದಂತೆ 5 ಮಂದಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಗಾಗಿ ಬಲೆ ಬೀಸಿದ್ದಾರೆ.

ನಿನ್ನೆ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ, ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ಮಾಡಿದ್ದ ನಲಪಾಡ್ ಹ್ಯಾರಿಸ್ ಮತ್ತು ಆತನ ಸಹಚರರು, ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಬಳಿಕವೂ ಮತ್ತೆ ಹಲ್ಲೆ ನಡೆಸಿದ್ದರು. ಈ ಪ್ರಕರಣ ಭಾರೀ ಸುದ್ದಿಯಾಗಿ ಶಾಸಕರ ಪುತ್ರನ ದೌರ್ಜನ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...