alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಅಲೆಯಲ್ಲಿ ಕುಸಿದ ಕಾಂಗ್ರೆಸ್ ಕೋಟೆ

ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬರೋದು ಬಹುತೇಕ ಖಚಿತವಾಗಿದೆ. ಬಿಜೆಪಿ 97 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಿಂಗ್ ಮೇಕರ್ ಜೆಡಿಎಸ್ 33 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.ಇದೇ ವೇಳೆ ಇತರೇ ಪಕ್ಷಗಳು 2 ಗೆಲುವು ಸಾಧಿಸಿವೆ.

ಕರ್ನಾಟಕದಲ್ಲಿ ಬಿಜೆಪಿಗೆ ಸಿಗ್ತಿರುವ ಗೆಲುವು ನೋಡಿದ್ರೆ ನಾಲ್ಕು ವರ್ಷವಾದ್ರೂ ಮೋದಿಯನ್ನು ಜನ ಮರೆತಿಲ್ಲ ಎಂಬುದು ಸಾಭೀತಾಗಿದೆ. 2014ರಲ್ಲಿ ಮೋದಿ ಅಲೆ ಶುರುವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಮೋದಿ ಮೋಡಿಗೆ ಜನರು ಒಳಗಾಗಿದ್ದಾರೆ. ದೇಶದ 29 ರಾಜ್ಯಗಳ ಪೈಕಿ ಈಗಾಗಲೇ 20 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. 21ನೇ ರಾಜ್ಯವಾಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತವಾಗಿದೆ. ಪಕ್ಷೇತರರು ಹಾಗೂ ಜೆಡಿಎಸ್ ಜೊತೆ ಸಂಧಾನ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನಲಾಗ್ತಿದೆ.

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್  ಗಾಂಧಿ ಅಧಿಕಾರಕ್ಕೆ ಬಂದ ಮೇಲೆ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದೆ. ಕರ್ನಾಟಕದಲ್ಲಿ ಗೆಲ್ಲಲೇ ಬೇಕು ಎಂಬ ದೃಢ ನಿರ್ಧಾರದೊಂದಿಗೆ ರಾಹುಲ್ ಗಾಂಧಿ ಪ್ರಚಾರಕ್ಕೆ ಇಳಿದಿದ್ದರು. ಫೆಬ್ರವರಿ 2018ರಿಂದ ಮೇ. ತಿಂಗಳವರೆಗೆ ರಾಹುಲ್ 3 ಡಜನ್ ರ್ಯಾಲಿ ಮಾಡಿದ್ದಾರೆ. ಅನೇಕ ಸಭೆಗಳನ್ನು ನಡೆಸಿದ್ದಾರೆ. 222 ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ ಪ್ರಚಾರ ಮಾಡಿದ್ದಾರೆ. ಅಲ್ಲಿಯವರೆಗೆ ಕಾಂಗ್ರೆಸ್ ಅಲೆಯಿದ್ದ ಕರ್ನಾಟಕದ ಚಿತ್ರಣ ಮೇ.1ರ ನಂತ್ರ ಸಂಪೂರ್ಣ ಬದಲಾಯ್ತು.

ಇದಕ್ಕೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಮೇ.1ರಿಂದ 12ರವರೆಗೆ ಮೋದಿ 2 ಡಜನ್ ರ್ಯಾಲಿ ನಡೆಸಿದ್ರು. ಮೋದಿ ಅಲೆ ನೋಡಿ ದಂಗಾದ ಸಿಎಂ ಸಿದ್ಧರಾಮಯ್ಯ ಅನೇಕ ಆರೋಪಗಳನ್ನು ಹೊರಿಸಿದ್ದರು. ಆದ್ರೆ ಇದ್ಯಾವುದೂ ಕರ್ನಾಟಕ ಜನತೆ ಮೇಲೆ ಪ್ರಭಾವ ಬೀರಲಿಲ್ಲ. ಅದಕ್ಕೆ ಫಲಿತಾಂಶ ಉತ್ತಮ ನಿದರ್ಶನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...