alex Certify
ಕನ್ನಡ ದುನಿಯಾ       Mobile App
       

Kannada Duniya

`ಮಿಷನ್ -2018 ಕರ್ನಾಟಕ’ ಪ್ಲಾನ್ ಶುರುಮಾಡಿದ ಮೋದಿ

2014ರ ಲೋಕಸಭೆ ಚುನಾವಣೆ ನಂತ್ರ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ನಿರಂತರ ಚುನಾವಣೆ ಬರ್ತಿದ್ದು ಅದ್ರಲ್ಲಿ ಕಾಂಗ್ರೆಸ್ ಗೆ ನಿರಂತರವಾಗಿ ಸೋಲಾಗ್ತಿದೆ. ಬಿಜೆಪಿ ಗೆಲುವು ಕಾಂಗ್ರೆಸ್ ನಾಯಕರ ಭಯಕ್ಕೆ ಕಾರಣವಾಗಿದೆ.

ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಕಷ್ಟು ಪ್ರಯತ್ನಪಟ್ಟಿದ್ದರು. ಆದ್ರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಪಿಎಂ ನರೇಂದ್ರ ಮೋದಿ ಗುಜರಾತ್ ನಲ್ಲಿಯೂ ಕಾಂಗ್ರೆಸ್ ಗೆ ಸೋಲಿನ ಪಾಠ ಹೇಳಿದ್ರು. ಈಗ ಮಿಷನ್ 2018 ಶುರುವಾಗಿದೆ. ಈಗಾಗಲೇ ಮೋದಿ ಮತ್ತು ತಂಡ ಇದ್ರ ಮೇಲೆ ಕೆಲಸ ಶುರುಮಾಡಿದೆ.

ಮುಂದಿನ ವರ್ಷ 2018ರಲ್ಲಿ ದೇಶದ 8 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದ್ರಲ್ಲಿ ರಾಜಸ್ತಾನ, ಮಧ್ಯಪ್ರದೇಶ, ಕರ್ನಾಟಕ ಹಾಗೂ ಛತ್ತೀಸಗಡದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಉಳಿದಂತೆ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ಹಾಗೂ ಮಿಜೋರಾಂನಲ್ಲಿಯೂ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

ನಾಲ್ಕ ದೊಡ್ಡ ರಾಜ್ಯಗಳ ಪೈಕಿ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡದಲ್ಲಿ ಈಗಾಗಲೇ ಬಿಜೆಪಿ ಆಡಳಿತವಿದೆ. ಆದ್ರೆ ಕರ್ನಾಟಕ ಮಾತ್ರ ಬಿಜೆಪಿ ಕೈ ತಪ್ಪಿದೆ. ಇದೇ ಕಾರಣಕ್ಕೆ ಅಮಿತ್ ಶಾ ಕರ್ನಾಟಕದತ್ತ ಹೆಚ್ಚಿನ ಗಮನ ನೀಡಲು ಮುಂದಾಗಿದ್ದಾರೆ.

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಬಿಜೆಪಿ ಬೆಂಬಲಿಗರನ್ನು ಹೊಂದಿರುವ ರಾಜ್ಯ ಕರ್ನಾಟಕ. 2007ರಲ್ಲಿ ಹೆಚ್ಚಿನ ಮಟ್ಟದ ವೋಟು ಪಡೆಯಲು ಬಿಜೆಪಿ ಸಫಲವಾಗಿತ್ತು. ನಂತ್ರ 2008-2013ರವರೆಗೆ ಬಿಜೆಪಿ ಆಡಳಿತ ನಡೆಸ್ತು. ಆದ್ರೆ ಇಬ್ಬರು ಸಿಎಂಗಳು ಬದಲಾದ್ರು. ಇದೇ ಬಿಜೆಪಿಗೆ ಹೊಡೆತ ನೀಡ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಲು ಕಾರಣವಾಯ್ತು.

2018ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಮುನ್ನವೇ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಸುವುದಾಗಿ ಈಗಾಗಲೇ ಬಿಜೆಪಿ ಘೋಷಣೆ ಮಾಡಿದೆ. ನರೇಂದ್ರ ಮೋದಿ ಕೂಡ ಕರ್ನಾಟಕದ ಅಭಿವೃದ್ಧಿ ಯೋಜನೆಗಳತ್ತ ಚಿತ್ತ ಹರಿಸಿದ್ದಾರೆ. ಗುಜರಾತ್-ಹಿಮಾಚಲ ಪ್ರದೇಶದಲ್ಲಿ ಗೆಲುವು ಸಿಗ್ತಿದ್ದಂತೆ ನೇರವಾಗಿ ಕರ್ನಾಟಕದ ಮಂಗಳೂರಿಗೆ ಬಂದ ಮೋದಿ ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ ನಲ್ಲಿ ಮೋದಿ ಒಮ್ಮೆ ಭೇಟಿ ನೀಡಿದ್ದರು. ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದ ಮೋದಿ ಆಗ್ಲೇ ಕರ್ನಾಟಕದಲ್ಲಿ ಪ್ರಚಾರವನ್ನು ಶುರುಮಾಡಿದ್ದಾರೆ. ಅಮಿತ್ ಶಾ ಕೂಡ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದು, ಒಂದೊಂದೇ ಅಸ್ತ್ರವನ್ನು ಹೊರಬಿಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...