alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳಗಾವಿ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆ: ಎರಡು ಬಣಗಳ ಪ್ರತಿಷ್ಠೆ ನಡುವೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ

ಬೆಳಗಾವಿ: ಇಂದು ಗಡಿ ಜಿಲ್ಲೆ ಬೆಳಗಾವಿಯ ಪಿ.ಎಲ್.ಡಿ. ಬ್ಯಾಂಕ್(ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮೀಣ ಅಭಿವೃದ್ಧಿ) ನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಹೋದರರಿಗೆ ಇದು ಪ್ರತಿಷ್ಠೆಯ ಸಮರವಾಗಿದ್ದರೆ, ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಭವಿಷ್ಯದ ಪ್ರಶ್ನೆಯಾಗಿದೆ.

ಬ್ಯಾಂಕಿನ 14 ಜನ ನಿರ್ದೇಶಕರ ಪೈಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಣದಲ್ಲಿ 9 ಜನರು, ಜಾರಕಿಹೊಳಿ ಬಣದಲ್ಲಿ 5 ಜನರು ಹಾಗೂ ಸರ್ಕಾರದಿಂದ ಒಬ್ಬರು ನಾಮನಿರ್ದೇಶಿತ ನಿರ್ದೇಶಕರಿದ್ದಾರೆ. ಜಾರಕಿಹೊಳಿ ಪರವಾಗಿದ್ದ ಮೂರು ಜನರನ್ನು ಲಕ್ಷ್ಮೀ ಹೆಬ್ಬಾಳ್ಕರ್ ಕಡೆಯವರು ಅಜ್ಞಾತ ಸ್ಥಳದಲ್ಲಿ ಇರಿಸಿ, ಬ್ಯಾಂಕ್‌ ಹಿಡಿತ ಸಾಧಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾರಕಿಹೊಳಿ ಬೆಂಬಲಿಗರನ್ನು ತಮ್ಮ ಬಳಿಯೇ ಉಳಿಸಿಕೊಂಡು ನೇರವಾಗಿ ಚುನಾವಣಾ ಸ್ಥಳಕ್ಕೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಗೆಲುವಿಗಾಗಿ ಎರಡು ಬಣದಿಂದ ಕೊನೆಗಳಿಗೆವರೆಗೆ ಶತ ಪ್ರಯತ್ನ ನಡೆಯಲಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಬಣದಲ್ಲಿ ನಿರ್ದೇಶಕರಾದ ಮಹಾಂತೇಶ ಪಾಟೀಲ್​, ಮುಷಪ್ಪ ಹಟ್ಟಿ, ಬಾಪುಸಾಹೇಬ ಜಮಾದಾರ್, ಚಿದಂಬರ ಕುಡಚಿ, ಬಾಪುಗೌಡ ಪಾಟೀಲ್​, ಪರುಶರಾಮ ಪಾಟೀಲ್​, ಮಹಾದೇವ ಪಾಟೀಲ್​, ರೇಖಾ ಕುತ್ರೆ, ಗೀತಾ ಪಿಂಗಟ್ ಗುರುತಿಸಿಕೊಂಡಿದ್ದಾರೆ. ಇನ್ನು ಜಾರಕಿಹೊಳಿ ಬಣದಲ್ಲಿ ರಾಮಪ್ಪ ಗೋಳಿ, ಪ್ರಸಾದ ಪಾಟೀಲ, ಸಚಿನ್ ಕೋಲಾರ, ಶಂಕರ್ ನಾವಗೇಕರ್, ಮಹಾಂತೇಶ್ ಉಳ್ಳಾಗಡ್ಡಿ ಇದ್ದಾರೆ.

ಒಂದು ವೇಳೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬಣ ಜಯಗಳಿಸಿದರೆ ಜಾರಕಿಹೊಳಿ ಸಹೋದರರು ಸೋಮವಾರದ ಹೊತ್ತಿಗೆ ತಮ್ಮೊಂದಿಗಿರುವ ಶಾಸಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡುವ ಬೆದರಿಕೆ ಹಾಕಿದ್ದಾರೆ. ಒಟ್ಟಾರೆ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆ ರಾಜ್ಯ ಸರ್ಕಾರದ ಭವಿಷ್ಯವನ್ನೂ ನಿರ್ಧರಿಸಲಿದ್ದು, ಎರಡು ಬಣಗಳ ನಡುವಿನ ಸೆಣಸಾಟದಲ್ಲಿ ಯಾರು ಜಯಗಳಿಸಲಿದ್ದಾರೆ ಎಂಬ ಕುತೂಹಲಕ್ಕೆ ಮಧ್ಯಾಹ್ನ 2 ಗಂಟೆಗೆ ತೆರೆ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...