alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಶಂಸೆಗೆ ಪಾತ್ರವಾಗಿದೆ ಈ ಪೊಲೀಸ್ ಕರ್ತವ್ಯ ನಿಷ್ಠೆ

ಬೆಂಗಳೂರು: ಪ್ರಾಮಾಣಿಕತೆ ಮೆರೆದವರ ಅದೆಷ್ಟೋ ಸುದ್ದಿ, ಮಾಹಿತಿಗಳನ್ನು ನೋಡಿದ್ದೇವೆ. ಹೀಗೆ ಬೆಂಗಳೂರು ಪೊಲೀಸರೊಬ್ಬರು ಕರ್ತವ್ಯ ನಿಷ್ಠೆ ಮೆರೆದ ಸುದ್ದಿಯೊಂದು ಇಲ್ಲಿದೆ ನೋಡಿ.

ಬೆಂಗಳೂರು ಕೋರಮಂಗಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರ ಠಾಣೆಯ ಪೊಲೀಸ್ ಶಾಂತಕುಮಾರ್ ಅವರಿಗೆ ಪರ್ಸ್ ಸಿಕ್ಕಿದೆ. ಪರ್ಸ್ ನಲ್ಲಿ 5000 ರೂ. ನಗದು, ಡೆಬಿಟ್ ಕಾರ್ಡ್ಸ್  ಹಾಗೂ ಕೆಲ ಮುಖ್ಯವಾದ ದಾಖಲೆಗಳಿರುವುದನ್ನು ಗಮನಿಸಿದ ಶಾಂತಕುಮಾರ್, ಅದನ್ನು ಕಳೆದುಕೊಂಡಿದ್ದ ಮಹಿಳೆಗೆ ಹಿಂತಿರುಗಿಸಿದ್ದಾರೆ.

ಪರ್ಸ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ ಶಾಂತಕುಮಾರ್ ಅದನ್ನು ಹಿಂತಿರುಗಿಸಿದ್ದು, ಅವರ ಕರ್ತವ್ಯ ನಿಷ್ಠೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆಡುಗೋಡಿ ಟ್ರಾಫಿಕ್ ಪೊಲೀಸರು ಈ ಮಾಹಿತಿ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...