alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸನಕ್ಕೂ ಕಾಲಿಟ್ಟಿದೆಯಾ ಪ್ಲಾಸ್ಟಿಕ್ ಸಕ್ಕರೆ..?

plastic-sugarಪ್ಲಾಸ್ಟಿಕ್ ಅಕ್ಕಿ, ಮೊಟ್ಟೆಯಾಯ್ತು. ಈಗ ಪ್ಲಾಸ್ಟಿಕ್ ಸಕ್ಕರೆಯೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆಯಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣವಾಗಿರುವುದು ಹಾಸನದಲ್ಲಿ ನಡೆದ ಘಟನೆ.

ಹಾಸನದಲ್ಲಿ ರೈಲ್ವೇ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿವಕುಮಾರ್ ಎಂಬವರು ಎರಡು ದಿನಗಳ ಹಿಂದೆ ಹಳೆ ಬಸ್ ನಿಲ್ದಾಣದ ಬಳಿಯಿರುವ ಪ್ರಾವಿಷನ್ ಸ್ಟೋರ್ ಒಂದರಿಂದ ಸಕ್ಕರೆ ಖರೀದಿಸಿದ್ದಾರೆ. ಇದನ್ನು ಬಳಸಿ ಕಾಫಿ ಮಾಡಲು ಹೋದ ವೇಳೆ ಅದು ಕರಗದೆ ಪಾತ್ರೆ ತಳದಲ್ಲೇ ಇರುವುದು ಕಂಡು ಬಂದಿದೆ.

ಕೂಡಲೇ ಅವರು ಪ್ರಾವಿಷನ್ ಸ್ಟೋರ್ ಗೆ ತೆರಳಿ ವಿಷಯ ತಿಳಿಸಿದ್ದಾರೆ. ಆದರೆ ಪ್ರಾವಿಷನ್ ಸ್ಟೋರ್ ನವರು ಆರೋಪವನ್ನು ನಿರಾಕರಿಸಿದ್ದಾರೆ. ಈ ವಿಚಾರ ಈಗ ಆಹಾರ ಇಲಾಖೆಗೂ ತಲುಪಿದ್ದು, ಸಕ್ಕರೆಯ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ಫಲಿತಾಂಶ ಬಂದ ಬಳಿಕ ಪ್ಲಾಸ್ಟಿಕ್ ಸಕ್ಕರೆಯ ಸತ್ಯಾಸತ್ಯತೆ ತಿಳಿದುಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...