alex Certify
ಕನ್ನಡ ದುನಿಯಾ       Mobile App
       

Kannada Duniya

ಟಯರ್ ಕಳಚಿ ಬಿದ್ದರೂ ಹಾರಾಟ ನಡೆಸಿದ ವಿಮಾನ: ತಪ್ಪಿದ ಭಾರೀ ದುರಂತ

spicejet-story-fb_647_030116115510

ಇತ್ತೀಚೆಗೆ ವಿಮಾನ ಅಪಘಾತಗಳು ಹೆಚ್ಚುತ್ತಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನದ ಟಯರ್ ಕಳಚಿ ಬಿದ್ದಿದ್ದರೂ ಸಹ ವಿಮಾನ ಹಾರಾಟ ನಡೆಸಿದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ನಡೆದಿಲ್ಲ.

ಮಂಗಳವಾರ ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಕೋಲ್ಕತ್ತಾಕ್ಕೆ ತೆರಳುತ್ತಿದ್ದ ಸ್ಪೈಸ್ ಜೆಟ್ ವಿಮಾನ ಟೇಕ್ ಆಫ್ ಆಗುವ ವೇಳೆ ಟಯರ್ ಕಳಚಿ ಬಿದ್ದಿತ್ತು. ಆದರೆ ವಿಮಾನ ಸಿಬ್ಬಂದಿ ಇದನ್ನು ಗಮನಿಸಲಿಲ್ಲ ಎನ್ನಲಾಗಿದ್ದು, ಆದರೆ ಕೋಲ್ಕತ್ತಾದಲ್ಲಿ ವಿಮಾನ ಲ್ಯಾಂಡ್ ಆಗುವ ವೇಳೆ ಟಯರ್ ಇಲ್ಲದಿರುವುದು ತಿಳಿದು ಬಂದಿದೆ. ತಕ್ಷಣ ಎಚ್ಚೆತ್ತ ಪೈಲಟ್ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಫಲರಾಗಿದ್ದಾರೆ.

ವಿಮಾನದಲ್ಲಿ 204 ಪ್ರಯಾಣಿಕರು ಸೇರಿದಂತೆ 211 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಒಂದೊಮ್ಮೆ ಲ್ಯಾಂಡಿಂಗ್ ಸಮಯದಲ್ಲಿ ಈ ವಿಚಾರ ಗಮನಕ್ಕೆ ಬಾರದಿದ್ದಲ್ಲಿ ಭಾರೀ ದುರಂತವೊಂದು ಸಂಭವಿಸುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣ ಕುರಿತಂತೆ ಈಗ ತನಿಖೆಗೆ ಆದೇಶಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...