alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ವಿಶ್ವ ಸುತ್ತಲಿದೆ ಅಮ್ಮ-ಮಗಳ ಜೋಡಿ

ದೀಪಿಕಾ ಮೆಬೆನ್ ಮತ್ತವರ ಮಗಳು ಆ್ಯಮಿ ಮೆಹ್ತಾ ಇಬ್ಬರೂ ಪೈಲಟ್ ಗಳು. ಆಗಸದಲ್ಲಿ ಹಾರಾಡೋದೇ ಇವರ ಹವ್ಯಾಸ. ಈಗ ಪುಟ್ಟದೊಂದು ವಿಮಾನ ಏರಿ ಜಗತ್ತು ಸುತ್ತಲು ಹೊರಟಿದ್ದಾರೆ. 80 ದಿನಗಳಲ್ಲಿ 50,000 ಕಿಮೀ ವಿಮಾನ ಪ್ರಯಾಣ ಮಾಡುವ ಮೂಲಕ ವಿಶ್ವಪರ್ಯಟನೆ ಮಾಡೋದು ಇವರ ಆಸೆ.

ಈ ಮೂಲಕ ವಿಶ್ವ ದಾಖಲೆ ಮಾಡುವ ಹಂಬಲ ಹೊಂದಿದ್ದಾರೆ. ಇವರು ಕರ್ನಾಟಕದವರು, ಮಹಿ ಅನ್ನೋ ಹಗುರವಾದ ವಿಮಾನದ ಮೂಲಕ ಈ ಸಾಹಸ ಮಾಡಲು ಹೊರಟಿದ್ದಾರೆ. ಇದರಲ್ಲಿ ತಲಾ 30 ಲೀಟರ್ ಸಾಮರ್ಥ್ಯದ ಎರಡು ಫ್ಯೂಯೆಲ್ ಟ್ಯಾಂಕ್ ಗಳಿವೆ.

ನಿರಂತರವಾಗಿ ಇದು 4.5 ಗಂಟೆಗಳ ಕಾಲ ಹಾರಬಲ್ಲದು. ವಿಶೇಷ ಅಂದ್ರೆ ಇವರಿಬ್ರೂ ಹಗಲು ಹೊತ್ತಿನಲ್ಲಿ ಮಾತ್ರ ವಿಮಾನ ಪ್ರಯಾಣ ಮಾಡಲಿದ್ದಾರೆ. 2018ರ ಫೆಬ್ರವರಿಯಲ್ಲಿ ಇವರ ಪ್ರಯಾಣ ಆರಂಭವಾಗಲಿದೆ. ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವುದು ಇವರ ಉದ್ದೇಶ.

ಬೆಂಗಳೂರಿನ ಜಕ್ಕೂರು ನಿಲ್ದಾಣದಿಂದ ಹೊರಡಲಿರುವ ತಾಯಿ-ಮಗಳ ಜೋಡಿ, ಆಗ್ನೇಯ ಏಷ್ಯಾ, ಜಪಾನ್, ರಷ್ಯಾ, ಅಲಾಸ್ಕನ್ ರಾಷ್ಟ್ರಗಳು, ಉತ್ತರ ಅಮೆರಿಕ, ಗ್ರೀನ್ ಲ್ಯಾಂಡ್, ಯುರೋಪಿಯನ್ ರಾಷ್ಟ್ರಗಳು, ಟೆಹ್ರಾನ್, ಅಫ್ಘಾನಿಸ್ತಾನ, ಪಾಕಿಸ್ತಾನದಾದ್ಯಂತ ಹಾರಾಟ ನಡೆಸಲಿದ್ದಾರೆ. 80 ದಿನಗಳ ಬಳಿಕ ಮತ್ತೆ ಜಕ್ಕೂರಿಗೆ ಬಂದಿಳಿಯಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...