alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಂಡಬ್ಲ್ಯೂ ಕಾರಿನಲ್ಲಿ ಬಂದು 14 ಸಾವಿರ ರೂ. ಬೆಲೆಯ ಟಿವಿ ಹೊತ್ತೊಯ್ದ ಕಳ್ಳರು…!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿನಲ್ಲೊಂದು ವಿಲಕ್ಷಣ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಐಷಾರಾಮಿ ಬಿಎಂಡಬ್ಲ್ಯೂ ಕಾರಿನಲ್ಲಿ ಠಾಕೂಠೀಕಾಗಿ ಆಗಮಿಸಿದ್ದ ಇಬ್ಬರು, ಎರಡು ದಿನಗಳ ಕಾಲ ಹೋಟೆಲ್ ನಲ್ಲಿ ತಂಗಿದ್ದು, ಬಳಿಕ ಬಿಲ್ ಕೂಡಾ ಪಾವತಿಸದೆ ಹೋಟೆಲ್ ನಲ್ಲಿದ್ದ ಟಿವಿ ಸಮೇತ ಪರಾರಿಯಾಗಿದ್ದಾರೆ.

ನ್ಯೂ ತಿಪ್ಪಸಂದ್ರದ ಗೀತಾಂಜಲಿ ಲೇಔಟ್ ನಲ್ಲಿರುವ ಆಸ್ಟ್ರಾ ಹೋಟೆಲ್ ಅಂಡ್ ಸೂಟ್ ನಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ರೂಮ್ ಪಡೆದುಕೊಂಡಿದ್ದಾರೆ. ತಮ್ಮ ಗುರುತಿನ ಪತ್ರವಾಗಿ ಇವರುಗಳು ಆಧಾರ್ ಕಾರ್ಡ್ ಜೆರಾಕ್ಸ್ ನೀಡಿದ್ದಾರೆ.

ಅವರ ದಿರಿಸು, ಮಾತನಾಡುವ ಶೈಲಿ ಕಂಡ ಹೋಟೆಲ್ ಸಿಬ್ಬಂದಿಗೆ ಯಾವುದೇ ಅನುಮಾನ ಬಂದಿಲ್ಲ. ಎರಡು ದಿನಗಳ ಬಳಿಕ ರೂಮಿನ ಬಾಗಿಲ ತೆರೆಯದಿರುವುದು ಗಮನಕ್ಕೆ ಬಂದಿದೆ. ಇಂಟರ್ ಕಾಂ ಮೂಲಕ ಕೊಠಡಿಗೆ ಕರೆ ಮಾಡಿದರೂ ಯಾರೂ ಸ್ವೀಕರಿಸಿಲ್ಲ. ಕಡೆಗೆ ಡುಪ್ಲಿಕೇಟ್ ಕೀ ಸಹಾಯದಿಂದ ತೆರೆದು ನೋಡಿದಾಗ ಟಿವಿ ಕಾಣೆಯಾಗಿರುವುದು ಕಂಡು ಬಂದಿದೆ.

ಸಿಸಿ ಟಿವಿ ಪರಿಶೀಲನೆ ವೇಳೆ ರೂಮಿನಲ್ಲಿದ್ದ ವ್ಯಕ್ತಿಗಳು 14 ಸಾವಿರ ರೂ. ಮೌಲ್ಯದ ಟಿವಿಯನ್ನು ತಮ್ಮ ಬಿಎಂಡಬ್ಲ್ಯೂ ಕಾರ್ ನಲ್ಲಿ ಇಟ್ಟುಕೊಂಡು ಹೋಗಿರುವುದು ಕಂಡುಬಂದಿದೆ. ಈಗ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಪರಿಶೀಲನೆ ವೇಳೆ ಆಧಾರ್ ಕಾರ್ಡ್ ಮಾಹಿತಿ ಸುಳ್ಳಿನಿಂದ ಕೂಡಿದೆ ಎಂಬುದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಅವರು ತಂದಿದ್ದ ಬಿಎಂಡಬ್ಲ್ಯೂ ಕಾರಿನ ರಿಜಿಸ್ಟ್ರೇಷನ್ ನಂಬರ್ ಕೂಡಾ ನಕಲಿ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...