alex Certify
ಕನ್ನಡ ದುನಿಯಾ       Mobile App
       

Kannada Duniya

ಇದ್ದಕ್ಕಿದ್ದಂತೆ ಕೆಟ್ಟು ನಿಂತ್ವು 60 ಕ್ಕೂ ಅಧಿಕ ಬೈಕ್ ಗಳು

petrol-pumpಮೈಸೂರು ಟಿ ನರಸೀಪುರ ರಸ್ತೆಯ ಮೇಗಳಾಪುರದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸಿಕೊಂಡಿದ್ದ 60 ಕ್ಕೂ ಅಧಿಕ ಗ್ರಾಹಕರ ಬೈಕ್ ಗಳು ಕೆಟ್ಟು ನಿಂತಿದ್ದು, ಇದಕ್ಕೆ ಪೆಟ್ರೋಲ್ ಕಲಬೆರಕೆಯಾಗಿರುವುದೇ ಕಾರಣವೆಂದು ಆರೋಪಿಸಿ, ಬೈಕ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.

ವಜ್ರೇಗೌಡ ಎಂಬವರಿಗೆ ಸೇರಿದ ಮೇಗಳಾಪುರದಲ್ಲಿನ ಮಹದೇಶ್ವರ ಪೆಟ್ರೋಲ್ ಬಂಕ್ ನಲ್ಲಿ ನಿನ್ನೆ ಹಾಗೂ ಇಂದು ಪೆಟ್ರೋಲ್ ಹಾಕಿಸಿಕೊಂಡಿದ್ದವರ 60 ಕ್ಕೂ ಅಧಿಕ ಬೈಕ್ ಗಳು ಕೆಟ್ಟು ಹೋಗಿವೆ ಎನ್ನಲಾಗಿದೆ. ಕಲಬೆರಕೆ ಪೆಟ್ರೋಲ್ ಇದಕ್ಕೆ ಕಾರಣವೆಂದು ಆರೋಪಿಸಿರುವ ಬೈಕ್ ಮಾಲೀಕರು, ತಮ್ಮ ಬೈಕ್ ಗಳನ್ನು ರಿಪೇರಿ ಮಾಡಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಸ್ಥಳಕ್ಕೆ ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದಾರೆ. ಪೆಟ್ರೋಲ್ ಬಂಕ್ ಮಾಲೀಕರಿಗೆ ಸೇರಿದ ಬಸ್ ಗಳನ್ನು ತಡೆದು ನಿಲ್ಲಿಸಿರುವ ಬೈಕ್ ಮಾಲೀಕರು, ತಮ್ಮ ಬೈಕ್ ಗಳನ್ನು ರಿಪೇರಿ ಮಾಡಿಸಿಕೊಡುವ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...