alex Certify
ಕನ್ನಡ ದುನಿಯಾ       Mobile App
       

Kannada Duniya

ಮುಗೀತು ಚಂದ್ರಗ್ರಹಣ, ದೇವಾಲಯಗಳಲ್ಲಿ ಶುದ್ಧೀಕರಣ

ಚಂದ್ರಗ್ರಹಣದ ಕಾರಣದಿಂದ ಬಂದ್ ಆಗಿದ್ದ ದೇವಾಲಯಗಳ ಬಾಗಿಲು ತೆರೆಯಲಾಗಿದ್ದು, ಶುದ್ಧೀಕರಣ ಕಾರ್ಯ ಆರಂಭವಾಗಿದೆ.

ಚಂದ್ರಗ್ರಹಣದ ಹಿನ್ನಲೆಯಲ್ಲಿ ಸಂಜೆಯಿಂದಲೇ ಬಹುತೇಕ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ನಿಲ್ಲಿಸಲಾಗಿತ್ತು. ಮತ್ತೆ ಕೆಲವು ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲೇ ವಿಶೇಷ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.

ಚಂದ್ರಗ್ರಹಣ ಮುಗಿದ ನಂತರ ಮತ್ತೆ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಹೋಮ ಹವನ ನಡೆಸಲಾಗಿದೆ.

ಅನೇಕರು ಮನೆಯಿಂದ ಹೊರಗೇ ಬಾರದೇ ಗ್ರಹಣದ ಸಮಯವನ್ನು ಕಳೆದರೆ, ಮತ್ತೆ ಕೆಲವರು ಬಾನಂಗಳದ ವಿಸ್ಮಯವನ್ನು ಕಣ್ತುಂಬಿಕೊಂಡಿದ್ದಾರೆ. ಚಂದ್ರಗ್ರಹಣದ ಅಪರೂಪದ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಗ್ರಹಣ ಮುಗಿದ ಬಳಿಕ ಹೆಚ್ಚಿನ ಜನ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮನೆಗಳಲ್ಲಿಯೂ ಶುದ್ಧೀಕರಣ ಕಾರ್ಯ ನಡೆಸಿ, ಅಡುಗೆ ತಯಾರಿ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...