alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟವ ಸಿಕ್ಕಿ ಬಿದ್ದದ್ದು ಹೀಗೆ..!

mng vvಆತ ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾವೊಂದನ್ನು ಇಟ್ಟಿದ್ದ. ಇದೇ ಕ್ಯಾಮರಾ ಪೊಲೀಸರಿಗೆ ತನ್ನನ್ನು ಹಿಡಿದುಕೊಡಬಹುದು ಅನ್ನೋ ಕಲ್ಪನೆಯೂ ಅವನಿಗಿರಲಿಲ್ಲ.

ತನ್ನ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ. ಆದ್ರೆ ಅವನ ಹಾವಭಾವ, ಡ್ರೆಸ್ಸಿಂಗ್ ಸೆನ್ಸ್ ಇವೆಲ್ಲ ಅದೇ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದನ್ನು ಗಮನಿಸಿದ್ದ ಕೊಣಾಜೆ ಪೊಲೀಸ್ರು ದೂರು ಬಂದ 14 ದಿನಗಳೊಳಗೆ ಕಾಮುಕ ವಿದ್ಯಾರ್ಥಿಗೆ ಕೋಳ ತೊಡಿಸಿದ್ದಾರೆ.

ಎರಡನೇ ವರ್ಷದ ಪದವಿ ಓದ್ತಾ ಇದ್ದ ವಿದ್ಯಾರ್ಥಿ ಸಂತೋಷ್ ಮಾಡಿದ ಕುಕೃತ್ಯ ಇದು. ಸಂತೋಷ್ ಯೂನಿವರ್ಸಿಟಿಯ ಬಯೋ ಸೈನ್ಸ್ ವಿಭಾಗದ ಲೇಡಿಸ್ ಟಾಯ್ಲೆಟ್ ನಲ್ಲಿ ತನ್ನ ಮೊಬೈಲ್ ಫೋನ್ ಕ್ಯಾಮರಾ ಆನ್ ಮಾಡಿ ಇಡ್ತಾ ಇದ್ದ. ಮೊಬೈಲ್ ಗಮನಿಸಿದ ವಿದ್ಯಾರ್ಥಿನಿಯೊಬ್ಳು ಆಗಸ್ಟ್ 24ರಂದು ವಿವಿಯ ಅಧಿಕಾರಿಗಳಿಗೆ ದೂರು ನೀಡಿದ್ದಳು. ಸೆಪ್ಟೆಂಬರ್ 1 ರಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಸುಳ್ಯ ಮೂಲದ ಸಂತೋಷ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ಸ್ ಪೆಕ್ಟರ್ ಅಶೋಕ್ ನೇತೃತ್ವದ ತಂಡಕ್ಕೆ ಆರೋಪಿಯ ಬಗ್ಗೆ ಇದ್ದ ಏಕೈಕ ಸುಳಿವು ಅಂದ್ರೆ ಮೊಬೈಲ್ ನಲ್ಲಿ ಸೆರೆಯಾಗಿದ್ದ ಮುಸುಕುಧಾರಿ ವ್ಯಕ್ತಿ. ಎಲ್ಲ ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪೊಲೀಸರು, ಉಡುಪಿನ ಮೂಲಕ ಆರೋಪಿಯನ್ನು ಪತ್ತೆ ಮಾಡಿದ್ದಾರೆ. 82 ಜನರನ್ನು ವಿಚಾರಣೆ ನಡೆಸಿದ ಪೊಲೀಸರು, ಟಾಯ್ಲೆಟ್ ನಲ್ಲಿದ್ದ ಮೊಬೈಲ್ ಅನ್ನು ಎಲ್ಲಿಂದ ಯಾರು ಖರೀದಿಸಿದ್ದರು ಅನ್ನೋದನ್ನು ಪತ್ತೆ ಮಾಡಿದ್ರು.

ಹಾಗಾಗಿ ಸಂತೋಷ್ ನನ್ನು ಹಿಡಿಯುವುದು ಸುಲಭವಾಯ್ತು. ಪೊಲೀಸ್ ಆಯುಕ್ತರು ಖಾಕಿ ಪಡೆಗೆ 10,000 ರೂಪಾಯಿ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ. ಸಂತೋಷ್ ತಾನು ಏಕಾಂಗಿಯಾಗಿಯೇ ಶೌಚಾಲಯದಲ್ಲಿ ಕ್ಯಾಮರಾ ಅಳವಡಿಸುವ ನೀಚ ಕೃತ್ಯ ಎಸಗುತ್ತಿದ್ದೆ ಅಂತಾ ತಪ್ಪೊಪ್ಪಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...