alex Certify
ಕನ್ನಡ ದುನಿಯಾ       Mobile App
       

Kannada Duniya

ಸದುದ್ದೇಶಕ್ಕಾಗಿ ನಡೆದಿದೆ ಈ ಸೈಕಲ್ ಸವಾರಿ

ದೇಶದ ಯುವಕರಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಂಗಳೂರಿನ‌ ಸುನೀಲ್ ಕೈಗೊಂಡಿರುವ ಸೈಕಲ್ ಸವಾರಿ ನಾಗಪುರ ತಲುಪಿದೆ.

ಸೆ.7ರಂದು ಲೇ-ಲಡಾಕ್ ನಲ್ಲಿ ಆರಂಭಗೊಂಡ ಏಕಾಂಗಿ ಸೈಕಲ್ ಸವಾರಿ,‌ ಶುಕ್ರವಾರ ನಾಗಪುರ ತಲುಪಿದ್ದು, ಇನ್ನು 15 ದಿನಗಳಲ್ಲಿ ಬಾಕಿ 2000. ಸಾವಿರ ಕಿಮೀ ಕ್ರಮಿಸಿ ಕನ್ಯಾಕುಮಾರಿ ತಲುಪುವ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರು ಬಹುರಾಷ್ಟ್ರೀಯ ಬ್ಯಾಂಕ್‌ ನ‌ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಅವರು, ಜನರಲ್ಲಿ‌ ಪರಿಸರ ಸಂರಕ್ಷಣೆ ಹಾಗೂ‌ ಸೈಕಲ್ ಓಡಿಸುವ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮುಂದಿನ ಜನಾಂಗಕ್ಕೆ ಮಾಲಿನ್ಯರಹಿತ ಸಮಾಜ ನೀಡಲು ಕೆಲಸಕ್ಕೆ ರಾಜೀನಾಮೆ ನೀಡಿ, ಲೇ- ಕನ್ಯಾಕುಮಾರಿ ಸೋಲೋ ಸೈಕಲ್ ರೈಡ್ ಆರಂಭಿಸಿದ್ದಾರೆ.

ದಾರಿಯುದ್ದಕ್ಕೂ ಸಿಗುವ ಜನರೊಂದಿಗೆ ಚರ್ಚಿಸಿ, ವಾಹನ ಚಾಲನೆಯಿಂದಾಗುವ ವಾಯುಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಸೈಕಲ್ ಸವಾರಿ ಮಾಡಲು ಮನವಿ ಮಾಡುತ್ತಿದ್ದಾರೆ. ಇಂದಿನ ಯುವಕರು ಕೈಜೋಡಿಸಿದರೆ ಮಾತ್ರ ಇದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಆದ್ದರಿಂದ ಯುವಕರ ಬಗ್ಗೆ ಹೆಚ್ಚು ನಿಗಾ ವಹಿಸಲಾಗುತ್ತಿದೆ. ಮುಂದಿನ ದಿನದಲ್ಲಿ ಸೈಕಲ್ ರೈಡಿಂಗ್ ಟೂರ್ ಆಯೋಜಿಸುವ ಯೋಜನೆಯಿಂದ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...