alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಮ ಪಂಚಾಯಿತಿ ನೌಕರರಿಗೆ ಬಂಪರ್ ಕೊಡುಗೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಆದೇಶ ಹೊರಡಿಸಿದ ಬೆನ್ನಲ್ಲೇ, ಗ್ರಾಮ ಪಂಚಾಯಿತಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.

ರಾಜ್ಯದ 6024 ಗ್ರಾಮ ಪಂಚಾಯಿತಿಗಳ 50,114 ನೌಕರರಿಗೆ ರಾಜ್ಯ ಸರ್ಕಾರದ ವತಿಯಿಂದಲೇ ವೇತನವನ್ನು ಪಾವತಿಸಲಾಗುತ್ತದೆ. ವಿಶೇಷ ನಿಯಮಾವಳಿ ರೂಪಿಸಿ 2014 ರಲ್ಲಿ ಗ್ರಾಮ ಪಂಚಾಯಿತಿಗಳಲ್ಲಿನ ನೌಕರರನ್ನು ಸಕ್ರಮಗೊಳಿಸಲಾಗಿತ್ತು. ನೌಕರರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಮೊದಲಾದ ಸೌಲಭ್ಯಗಳು ದೊರೆತರೂ, ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ನಿಗದಿಪಡಿಸಲಾಗಿದ್ದ ಕನಿಷ್ಠ ವೇತನ ಪಾವತಿಸಲು ಕಷ್ಟಸಾಧ್ಯವಾಗಿತ್ತು.

ಈಗ ಸರ್ಕಾರದ ವತಿಯಿಂದಲೇ ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಿ.ಟಿ.ಪಿ. ಆಪರೇಟರ್, ಪಂಪ್ ಹೌಸ್ ಆಪರೇಟರ್, ಸ್ವಚ್ಛತಾಗಾರರಿಗೆ ವೇತನ ಪಾವತಿ ಮಾಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಈ ಕುರಿತು ಆದೇಶ ಹೊರಡಿಸಲಾಗಿದ್ದು, ವಾರ್ಷಿಕ 736.68 ಕೋಟಿ ರೂ. ವ್ಯಯಿಸಲಾಗುತ್ತದೆ.

ಬಿಲ್ ಕಲೆಕ್ಟರ್ ಗಳಿಗೆ 12,887 ರೂ., ಕ್ಲರ್ಕ್ ಕಂ ಡಿ.ಟಿ.ಪಿ. ಆಪರೇಟರ್ 12,887 ರೂ., ಪಂಪ್ ಹೌಸ್ ಆಪರೇಟರ್/ ಪಂಪ್ ಮೆಕಾನಿಕ್ 11,353 ರೂ., ಜವಾನ 10,775 ರೂ., ಸ್ವಚ್ಛತಾಗಾರ ಸಿಬ್ಬಂದಿಗೆ 13,635 ರೂ. ವೇತನ ನೀಡಲಾಗುವುದು.

ಪ್ರತಿ ತಿಂಗಳು ಸರ್ಕಾರದ ವತಿಯಿಂದಲೇ ಗ್ರಾಪಂ ನೌಕರರಿಗೆ ವೇತನ ಪಾವತಿಸಲಾಗುತ್ತದೆ ಎಂದು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...